ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ಸಿಲಿಂಡರ್‌ ದರ ₹19 ಇಳಿಕೆ

Published 1 ಮೇ 2024, 13:35 IST
Last Updated 1 ಮೇ 2024, 13:35 IST
ಅಕ್ಷರ ಗಾತ್ರ

ನವದೆಹಲಿ: ವಾಣಿಜ್ಯ ಬಳಕೆಯ ಸಿಲಿಂಡರ್‌ ದರವನ್ನು ಬುಧವಾರ ₹19 ಕಡಿತಗೊಳಿಸಲಾಗಿದ್ದು, 19 ಕೆ.ಜಿ ತೂಕದ ಸಿಲಿಂಡರ್‌ ದರವು ₹1,745.50 ಆಗಿದೆ.

ಒಂದು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ವಾಣಿಜ್ಯ ಸಿಲಿಂಡರ್‌ ಬೆಲೆಯಲ್ಲಿ ಕಡಿತ ಮಾಡಲಾಗಿದೆ. ಫೆಬ್ರುವರಿ 1ರಂದು ₹14 ಹಾಗೂ ಮಾರ್ಚ್ 1ರಂದು ₹25.5 ದರ ಹೆಚ್ಚಿಸಲಾಗಿತ್ತು. ಬಳಿಕ ಏಪ್ರಿಲ್‌ 1ರಂದು ₹30.5 ದರ ಕಡಿತಗೊಳಿಸಲಾಗಿತ್ತು.

ಅಂತರರಾಷ್ಟ್ರೀಯ ಮಟ್ಟದಲ್ಲಿನ ಕಚ್ಚಾ ತೈಲದ ದರ ಹಾಗೂ ವಿದೇಶಿ ವಿನಿಮಯ ದರದ ಆಧಾರದ ಮೇಲೆ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು, ಎಟಿಎಫ್‌ ಹಾಗೂ ಸಿಲಿಂಡರ್‌ ಬೆಲೆಯನ್ನು ಪರಿಷ್ಕರಿಸಿವೆ.

ಆದರೆ, ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸದ್ಯ 14.2 ಕೆ.ಜಿ ತೂಕದ ಸಿಲಿಂಡರ್‌ ದರವು ₹803 ಆಗಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿಯೂ ಬದಲಾವಣೆಯಾಗಿಲ್ಲ.

ಎಟಿಎಫ್‌ ದರ ಏರಿಕೆ: ವಿಮಾನಗಳಲ್ಲಿ ಬಳಸುವ ಇಂಧನದ (ಎಟಿಎಫ್‌) ಬೆಲೆಯನ್ನು ಶೇ 0.7ರಷ್ಟು ಏರಿಕೆ ಮಾಡಲಾಗಿದೆ. ಸದ್ಯ ನವದೆಹಲಿಯಲ್ಲಿ ಪ್ರತಿ ಕಿಲೋ ಲೀಟರಿಗೆ ₹749.25 ದರ ಹೆಚ್ಚಳವಾಗಿದೆ (ಒಂದು ಕಿಲೋ ಲೀಟರ್‌ ಎಂದರೆ ಒಂದು ಸಾವಿರ ಲೀಟರ್). ಪ್ರತಿ ಕಿಲೋ ಲೀಟರ್ ದರವು ₹1.01 ಲಕ್ಷ ಆಗಿದೆ ಎಂದು ಕಂಪನಿಗಳು ತಿಳಿಸಿವೆ.

ಸ್ಥಳೀಯ ತೆರಿಗೆ ಆಧಾರದ ಮೇಲೆ ರಾಜ್ಯಗಳವಾರು ಎಟಿಎಫ್ ಬೆಲೆಯಲ್ಲಿ ವ್ಯತ್ಯಾಸವಾಗಲಿದೆ. ಮುಂಬೈನಲ್ಲಿ ಪ್ರತಿ ಕಿಲೋ ಲೀಟರ್ ದರವು ₹94,466ರಿಂದ ₹95,173ಕ್ಕೆ ಮುಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT