ಗುರುವಾರ , ಅಕ್ಟೋಬರ್ 24, 2019
21 °C
ನವರಾತ್ರಿ ಸಂದರ್ಭದಲ್ಲಿ ಮಾರಾಟ ಹೆಚ್ಚಾಗುವ ನಿರೀಕ್ಷೆಯಲ್ಲಿ ಕಂಪನಿಗಳು

ಹಳಿಗೆ ಮರಳದ ವಾಹನ ಉದ್ಯಮ

Published:
Updated:
Prajavani

ನವದೆಹಲಿ: ದೇಶದ ವಾಹನ ಉದ್ಯಮವು ಹಳಿಗೆ ಮರಳುವ ಲಕ್ಷಣಗಳೇ ಕಾಣುತ್ತಿಲ್ಲ. ಹಬ್ಬದ ಸಾಲು ಆರಂಭವಾಗುವ ಸೆಪ್ಟೆಂಬರ್‌ ತಿಂಗಳು ಸಹ ವಾಹನ ಉದ್ಯಮಕ್ಕೆ ಚೇತರಿಕೆ ನೀಡಲು ವಿಫಲವಾಗಿದೆ.

ಮಂದಗತಿಯ ಆರ್ಥಿಕ ಬೆಳವಣಿಗೆಯಿಂದ ಖರೀದಿ ಸಾಮರ್ಥ್ಯ ಕುಸಿದಿದೆ. ಜಿಎಸ್‌ಟಿ ದರ ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಪ್ರಮುಖ ಕಂಪನಿಗಳ ವಾಹನ ಮಾರಾಟದಲ್ಲಿ ಎರಡಂಕಿ ಇಳಿಕೆ ಕಂಡುಬಂದಿದೆ. 

ದೇಶದ ಮುಂಚೂಣಿ ಕಂಪನಿ ಮಾರುತಿ ಸುಜುಕಿ ಇಂಡಿಯಾದ ದೇಶಿ ಮಾರಾಟ ಶೇ 26.7ರಷ್ಟು ಕುಸಿದಿದೆ. ಸಣ್ಣ ಗಾತ್ರದ ಕಾರುಗಳ ಮಾರಾಟ ಶೇ 42.6ರಷ್ಟು, ಕಾಂಪ್ಯಾಕ್ಟ್ ಕಾರುಗಳ ಮಾರಾಟ ಶೇ 22.7ರಷ್ಟು ಹಾಗೂ ಮಧ್ಯಮ ಗಾತ್ರ, ಯುಟಿಲಿಟಿ ಕಾರುಗಳ ಮಾರಾಟದಲ್ಲಿಯೂ ಇಳಿಕೆಯಾಗಿದೆ.

ಟಾಟಾ ಮೋಟರ್ಸ್‌ನ ಪ್ರಯಾಣಿಕ ವಾಹನ ಮಾರಾಟ ಶೇ 56ರಷ್ಟು ಕುಸಿದಿದೆ.

ಹೋಂಡಾ ಮೋಟರ್ಸ್‌ ಇಂಡಿಯಾದ ಪ್ರಯಾಣಿಕ ವಾಹನ ಮಾರಾಟ ಶೇ 14.8ರಷ್ಟು ಇಳಿಕೆಯಾಗಿದ್ದು, 40,705  ವಾಹನಗಳನ್ನು ಮಾರಾಟ ಮಾಡಿದೆ.

ಮಹೀಂದ್ರಾ ಆ್ಯಂಡ್‌ ಮಹೀಂದ್ರಾದ ಪ್ರಯಾಣಿಕ ವಾಹನ ಮಾರಾಟ ಶೇ 33ರಷ್ಟು ಕಡಿಮೆಯಾಗಿದೆ.

‘ಹಬ್ಬದ ಅವಧಿಯಲ್ಲಿ ಮಾರಾಟದಲ್ಲಿ ಏರಿಕೆಯಾಗುವ ವಿಶ್ವಾಸದಲ್ಲಿದ್ದೇವೆ. ನವರಾತ್ರಿಯು ವಾಹನ ಉದ್ಯಮಕ್ಕೆ ಚೇತರಿಕೆ ನೀಡಲಿದೆ’ ಎಂದು ಮಹೀಂದ್ರಾದ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ವಿಜಯ್ ರಾಮ್‌ ನಕ್ರಾ ಹೇಳಿದ್ದಾರೆ.

ಟೊಯೋಟ ಕಂಪನಿಯ ದೇಶಿ ಮಾರಾಟದಲ್ಲಿ ಶೇ 18ರಷ್ಟು ಕಡಿಮೆಯಾಗಿದ್ದರೆ ಹೋಂಡಾ ಕಾರ್ಸ್‌ನ ದೇಶಿ ಮಾರಾಟದಲ್ಲಿ ಶೇ 37.24ರಷ್ಟು ಇಳಿಕೆಯಾಗಿದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)