ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜಾಜ್‌ ಆಟೊಗೆ ಶೇ 35ರಷ್ಟು ಲಾಭ

Published 18 ಏಪ್ರಿಲ್ 2024, 16:02 IST
Last Updated 18 ಏಪ್ರಿಲ್ 2024, 16:02 IST
ಅಕ್ಷರ ಗಾತ್ರ

ನವದೆಹಲಿ: ವಾಹನ ತಯಾರಿಕಾ ಕಂಪನಿ ಬಜಾಜ್‌ ಆಟೊ, 2023–24ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ತೆರಿಗೆ ನಂತರ, ಶೇ 35ರಷ್ಟು ನಿವ್ವಳ ಲಾಭ ಗಳಿಸಿದೆ. 

2022–23ನೇ ಆರ್ಥಿಕ ವರ್ಷ ಮಾರ್ಚ್‌ ತ್ರೈಮಾಸಿಕದಲ್ಲಿ ₹1,433 ಕೋಟಿ ಲಾಭ ಗಳಿಸಿತ್ತು. ಈ ಬಾರಿ ₹1,936 ಕೋಟಿಗೆ ಏರಿಕೆ ಆಗಿದೆ ಎಂದು ಕಂಪನಿಯು ಗುರುವಾರ ತಿಳಿಸಿದೆ.

ವರಮಾನವು ₹8,905 ಕೋಟಿಯಿಂದ ₹11,485 ಕೋಟಿಗೆ ಮುಟ್ಟಿದೆ. ಒಟ್ಟಾರೆ ಶೇ 29ರಷ್ಟು ಹೆಚ್ಚಳವಾಗಿದೆ. 

ತೆರಿಗೆ ನಂತರದ ಲಾಭವು 2022–23ರಲ್ಲಿ ₹5,628 ಕೋಟಿ ಇತ್ತು. 2023–24ರಲ್ಲಿ ₹7,479 ಕೋಟಿಗೆ ಹೆಚ್ಚಳವಾಗಿದೆ. ವರಮಾನವು ₹36,428 ಕೋಟಿಯಿಂದ ₹44,685 ಕೋಟಿಗೆ ಏರಿಕೆಯಾಗಿದೆ ಎಂದು ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT