ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಡಿಎಫ್‌ಸಿ, ವೈಶ್ಯ ಬ್ಯಾಂಕ್‌ನಿಂದ ಬಡ್ಡಿದರ ಹೆಚ್ಚಳ

Last Updated 10 ಮೇ 2022, 2:31 IST
ಅಕ್ಷರ ಗಾತ್ರ

ನವದೆಹಲಿ: ಎಚ್‌ಡಿಎಫ್‌ಸಿ ಬ್ಯಾಂಕ್, ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ಮತ್ತು ಕರೂರ್‌ ವೈಶ್ಯ ಬ್ಯಾಂಕ್‌ ಸಾಲದ ಮೇಲಿನ ಬಡ್ಡಿದರ ಹೆಚ್ಚಳ ಮಾಡಿವೆ. ಕರೂರ್‌ ವೈಶ್ಯ ಬ್ಯಾಂಕ್‌ ಎಕ್ಸ್‌ಟರ್ನಲ್‌ ಬೆಂಚ್‌ಮಾರ್ಕ್‌ ದರವನ್ನು ಶೇಕಡ 7.15ರಿಂದ ಶೇ 7.45ಕ್ಕೆ ಏರಿಕೆ ಮಾಡಿದೆ.

ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ಎಂಸಿಎಲ್‌ಆರ್‌ ಅನ್ನು ಶೇಕಡ 0.15ರಷ್ಟು ಹೆಚ್ಚಿಸಿದೆ. ಇದರಿಂದ ಗ್ರಾಹಕರಿಗೆ ನೀಡಿಕೆ ದರವು ಶೇ 7.40ಕ್ಕೆ ಏರಿಕೆ ಆಗಿದೆ. ರೆಪೊ ದರ ಆಧರಿಸಿದ ಸಾಲಗಳ ಬಡ್ಡಿದರವನ್ನು ಸಹ ಶೇ 6.80ರಿಂದ ಶೇ 7.20ಕ್ಕೆ ಏರಿಕೆ ಮಾಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ. ಮೇ 7ರಿಂದಲೇ ಈ ದರಗಳು ಅನ್ವಯಿಸಲಿವೆ ಎಂದು ಹೇಳಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ ಎಂಸಿಎಲ್‌ಆರ್ ಅನ್ನು ಶೇ 0.25ರಷ್ಟು ಹೆಚ್ಚಿಸಿದೆ. ಇದು ಮೇ 7ರಿಂದಲೇ ಜಾರಿಗೆ ಬಂದಿದೆ. ಒಂದು ವರ್ಷದ ಅವಧಿಯ ಎಂಸಿಎಲ್‌ಆರ್ ದರವು ಶೇ 7.50ಗೆ ಏರಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT