ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರವು| ಬ್ಯಾಂಕ್‌ಗಳಿಗೆ ₹ 30 ಸಾವಿರ ಕೋಟಿ?

ಹಣಕಾಸು ಸಚಿವಾಲಯದ ಪರಾಮರ್ಶೆ
Last Updated 16 ಜೂನ್ 2019, 19:22 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ (ಪಿಎಸ್‌ಬಿ) ಬಜೆಟ್‌ನಲ್ಲಿ ₹ 30 ಸಾವಿರ ಕೋಟಿ ಬಂಡವಾಳ ನೆರವು ಸಿಗುವ ನಿರೀಕ್ಷೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಕೇಂದ್ರ ಹಣಕಾಸು ಸಚಿವಾಲಯವು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಬಂಡವಾಳ ಲಭ್ಯತೆಯ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಬಾಸೆಲ್‌–3 ನಿಯಮ ಅಳವಡಿಕೆಗೆ ಅಗತ್ಯವಾದ ಬಂಡವಾಳ ನೀಡುವ ಸಾಧ್ಯತೆ ಇದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 5ರಂದು ಬಜೆಟ್‌ ಮಂಡಿಸಲಿದ್ದಾರೆ.

ಬ್ಯಾಂಕ್‌ಗಳ ಸಾಲ ನೀಡಿಕೆ ಹೆಚ್ಚಿಸಲೂ ಬಂಡವಾಳದ ಅಗತ್ಯ ಇದೆ. ಆರ್‌ಬಿಐನ ಕಠಿಣ ಸ್ವರೂಪದ ನಿರ್ಬಂಧದ (ಪಿಸಿಎ) ವ್ಯಾಪ್ತಿಯಲ್ಲಿರುವ ಬ್ಯಾಂಕ್‌ಗಳಿಗೂ ನೆರವಿನ ಅಗತ್ಯವಿದೆ.

ಬ್ಯಾಂಕ್‌ ಆಫ್‌ ಇಂಡಿಯಾ, ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌, ಬ್ಯಾಂಕ್‌ ಆಫ್‌ ಮಹಾರಾಷ್ಟ್ರ, ಅಲಹಾಬಾದ್‌ ಬ್ಯಾಂಕ್‌ ಮತ್ತು ಕಾರ್ಪೊರೇಷನ್ ಬ್ಯಾಂಕ್‌, ದೇನಾ ಮತ್ತು ಬ್ಯಾಂಕ್‌ ಆಫ್‌ ಬರೋಡಾ ಬ್ಯಾಂಕ್‌ಗಳು ಈಗಾಗಲೇ ‘ಪಿಸಿಎ’ದಿಂದ ಹೊರಬಂದಿವೆ.

ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಎರಡು ಬ್ಯಾಂಕ್‌ಗಳನ್ನು ವಿಲೀನಗೊಳಿಸಲಾಗಿದೆ.

ಇದೇ ರೀತಿಯಲ್ಲಿ ಇನ್ನೂ ಮೂರು ಬ್ಯಾಂಕ್‌ಗಳನ್ನು ಸೇರಿಸುವ ನಿರ್ಧಾರಕ್ಕೆ ಬಂದರೆ ಅದಕ್ಕೂ ಹೆಚ್ಚುವರಿ ನೆರವು ನೀಡಬೇಕಾಗಿ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT