ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾರಿಸುತ್ತಿದೆ ಬ್ಯಾಂಕುಗಳ ಸ್ಥಿತಿ

Last Updated 24 ಡಿಸೆಂಬರ್ 2019, 18:47 IST
ಅಕ್ಷರ ಗಾತ್ರ

ಮುಂಬೈ: ಬ್ಯಾಂಕ್‌ಗಳ ಸ್ಥಿತಿ ಸುಧಾರಿಸುತ್ತಿದ್ದು, ವಸೂಲಾಗದ ಸಾಲದ (ಎನ್‌ಪಿಎ) ಪ್ರಮಾಣದಲ್ಲಿ ಇಳಿಕೆ ಕಂಡುಬರುತ್ತಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹೇಳಿದೆ.

2019–20ರ ಸೆಪ್ಟೆಂಬರ್‌ ಅಂತ್ಯಕ್ಕೆ ಸರಾಸರಿ ಎನ್‌ಪಿಎ ಶೇ 9.1ರಷ್ಟಿದೆ. ಇದು 2017–18ನೇ ಹಣಕಾಸು ವರ್ಷದಲ್ಲಿ ಶೇ 11.2ರಷ್ಟು ಗರಿಷ್ಠ ಮಟ್ಟದಲ್ಲಿ ಇತ್ತು ಎಂದು ಬ್ಯಾಂಕ್‌ಗಳ ಪ್ರಗತಿಯ ವಾರ್ಷಿಕ ವರದಿಯಲ್ಲಿತಿಳಿಸಿದೆ.

2018–19ರಲ್ಲಿದ್ದ ಶೇ 9.1ಕ್ಕೆ ಹೋಲಿಸಿದರೆ 2019–20ರಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಸ್ಥಿರವಾಗಿಯೇ ಇದೆ.ನಿವ್ವಳ ಎನ್‌ಪಿಎ 2017–18ರಲ್ಲಿ ಶೇ 6ರಷ್ಟಿತ್ತು. ಇದು 2018–19ರಲ್ಲಿ ಶೇ 3.7ಕ್ಕೆ ಇಳಿಕೆಯಾಗಿದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ನಿವ್ವಳ ಎನ್‌ಪಿಎ ಶೇ 8 ರಿಂದ ಶೇ 4.8ಕ್ಕೆ ಇಳಿಕೆಯಾಗಿದ್ದರೆ, ಖಾಸಗಿ ವಲಯದ ಎನ್‌ಪಿಎ ಶೇ 2.4 ರಿಂದ ಶೇ 2ಕ್ಕೆ ಇಳಿಕೆ ಕಂಡಿದೆ ಎಂದು ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT