ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲಿಪ್‌ಕಾರ್ಟ್‌ನ ಸಹ ಸಂಸ್ಥಾಪಕ ಬಿನ್ನಿ ಬನ್ಸಲ್‌ ರಾಜೀನಾಮೆ

Published 28 ಜನವರಿ 2024, 15:41 IST
Last Updated 28 ಜನವರಿ 2024, 15:41 IST
ಅಕ್ಷರ ಗಾತ್ರ

ನವದೆಹಲಿ: ಇ–ಕಾಮರ್ಸ್‌ನ ಪ್ರಮುಖ ಸಂಸ್ಥೆ ಫ್ಲಿಪ್‌ಕಾರ್ಟ್‌ನ ಸಹ ಸಂಸ್ಥಾಪಕ ಬಿನ್ನಿ ಬನ್ಸಲ್‌ ಅವರು ಕಂಪನಿಯ ಮಂಡಳಿಗೆ ರಾಜಿನಾಮೆ ನೀಡಿದ್ದಾರೆ ಎಂದು ಕಂಪನಿ ತಿಳಿಸಿದೆ.

ಫ್ಲಿಪ್‌ಕಾರ್ಟ್‌ನಲ್ಲಿನ ಎಲ್ಲ ಷೇರುಗಳ ಮಾರಾಟ ಮಾಡಿದ ಆರು ತಿಂಗಳ ನಂತರ ಈ ಬೆಳವಣಿಗೆ ನಡೆದಿದೆ.

‘ಫ್ಲಿಪ್‌ಕಾರ್ಟ್‌ ಸಮೂಹದ 16 ವರ್ಷದ ಸಾಧನೆಗಳ ಬಗ್ಗೆ ನನಗೆ ಹೆಮ್ಮೆಯಿದ್ದು, ಕಂಪನಿಯು ಪ್ರಬಲವಾಗಿದೆ. ಗಟ್ಟಿ ನಾಯಕತ್ವದ ತಂಡ ಮತ್ತು ಸ್ಪಷ್ಟವಾದ ಹಾದಿಯಲ್ಲಿ ಕಂಪನಿ ಮುನ್ನಡೆಯುತ್ತಿದೆ. ಈ ವಿಶ್ವಾಸದಿಂದಾಗಿ ನಾನು ಕಂಪನಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ. ಕಂಪನಿಯು ಸಮರ್ಥರ ಕೈಯಲ್ಲಿದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡಲಿದೆ. ಕಂಪನಿಯ ವ್ಯವಹಾರಕ್ಕೆ ಬೆಂಬಲಿಗನಾಗಿರುವೆ’ ಎಂದು ಬಿನ್ನಿ ಬನ್ಸಲ್‌ ಹೇಳಿದ್ದಾರೆ.

ಸಚಿನ್‌ ಬನ್ಸಲ್‌ ಜೊತೆ ಸೇರಿ 2007ರಲ್ಲಿ ಫ್ಲಿಪ್‌ಕಾರ್ಟ್‌ನ್ನು ಬಿನ್ನಿ ಬನ್ಸಲ್‌ ಸ್ಥಾಪಿಸಿದ್ದರು. 2018ರಲ್ಲಿ ವಾಲ್‌ಮಾರ್ಟ್‌, ಕಂಪನಿಯ ಶೇ 77ರಷ್ಟು ಷೇರುಗಳನ್ನು ₹1.74 ಲಕ್ಷ ಕೋಟಿಗೆ ಖರೀದಿಸಿತ್ತು. ಆಗ ಸಚಿನ್‌ ಬನ್ಸಲ್‌ ಕಂಪನಿಯನ್ನು ತೊರೆದಿದ್ದರು.

ಬಿನ್ನಿ ಬನ್ಸಲ್‌ ಅವರು ಇ–ಕಾಮರ್ಸ್‌ ವೇದಿಕೆಯಲ್ಲಿ ಮಾರಾಟಗಾರರಿಗೆ ಮಾರುಕಟ್ಟೆ ಬೆಂಬಲ ನೀಡಲು ತಮ್ಮದೇ ಆದ ಸ್ವಂತ ಕಂಪನಿಯನ್ನು ಆರಂಭಿಸಿದ್ದಾರೆ.

ಫ್ಲಿಪ್‌ಕಾರ್ಟ್‌ ಮೌಲ್ಯವು ಅಂದಾಜು ₹3.15 ಲಕ್ಷ ಕೋಟಿಗೆ ಏರಿಕೆಯಾಗಿದೆ. ಆದರೂ, ಕಂಪನಿ ಇನ್ನೂ ನಷ್ಟದಲ್ಲಿ ನಡೆಯುತ್ತಿದೆ. ಕಂಪನಿಯು ಒಟ್ಟು ವರಮಾನವು 2023–24ರ ಹಣಕಾಸು ವರ್ಷದಲ್ಲಿ ಶೇ 9.4ರಷ್ಟು ಏರಿಕೆಯಾಗಿ ₹56,012 ಕೋಟಿ ಆಗಿದೆ. 2022–23ರಲ್ಲಿ ಇದು ₹51,176 ಕೋಟಿ ಆಗಿತ್ತು. ಸಂಚಿತ ನಷ್ಟವು ₹3,371 ಕೋಟಿಯಿಂದ ₹4,890 ಕೋಟಿಗೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT