ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಪಿಎಲ್‌ನಿಂದ ಪಿಸಿಬಿ ಘಟಕ ವಿಸ್ತರಣೆ

Published 29 ಮೇ 2024, 15:43 IST
Last Updated 29 ಮೇ 2024, 15:43 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಪ್ರಮುಖ ಎಲೆಕ್ಟ್ರಾನಿಕ್ಸ್‌ ಕಂಪನಿಯಾದ ಬಿಪಿಎಲ್‌ ಲಿಮಿಟೆಡ್‌ ನಗರದಲ್ಲಿ ಹೊಸದಾಗಿ ಅತ್ಯಾಧುನಿಕ ಪಿಸಿಬಿ (ಪ್ರಿಂಟೆಡ್‌ ಸರ್ಕಿಟ್ ಬೋರ್ಡ್) ಘಟಕ ಸ್ಥಾಪಿಸಿದೆ.

‘ಉದ್ಯಮದ ವಿಸ್ತರಣೆಯ ಭಾಗವಾಗಿ ಈ ಘಟಕ ಸ್ಥಾಪಿಸಲಾಗಿದೆ. ಇದರಿಂದ ದೇಶದಲ್ಲಿ ಪಿಸಿಬಿ ವ್ಯಾಪ್ತಿಯ ವಿಸ್ತರಣೆಗೂ ಸಹಕಾರಿಯಾಗಿದೆ. ಇದು ವಿಶೇಷ ಎಲೆಕ್ಟ್ರಾನಿಕ್ಸ್‌ ಉಪಕರಣಗಳನ್ನು ಪೂರೈಸುವ ಗುರಿ ಹೊಂದಿದೆ’ ಎಂದು ಕಂಪನಿಯ ಸಿಒಒ ಶೈಲೇಶ್ ಮುದಲಿಯಾರ್ ತಿಳಿಸಿದ್ದಾರೆ. 

ಪ್ರಸ್ತುತ ದೇಶದಲ್ಲಿ ಪಿಸಿಬಿಗೆ ಬೇಡಿಕೆ ಹೆಚ್ಚುತ್ತಿದೆ. ಹಾಗಾಗಿ, ಕೇಂದ್ರ ಸರ್ಕಾರದ ‘ಮೇಕ್‌ ಇನ್‌ ಇಂಡಿಯಾ’ ಯೋಜನೆಯಡಿ ಘಟಕ ಸ್ಥಾಪಿಸಲಾಗಿದ್ದು, ಸುಧಾರಿತ ಮೂಲ ಸೌಕರ್ಯವನ್ನು ಒಳಗೊಂಡಿದೆ. ತ್ವರಿತಗತಿಯಲ್ಲಿ ದೇಶದ ಎಲೆಕ್ಟ್ರಾನಿಕ್ಸ್‌ ವಲಯದ ಬೆಳವಣಿಗೆಗೂ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

ಕಂಪನಿಯು ಐದು ದಶಕಗಳ ಕಾಲ ನಾವೀನ್ಯ, ಗುಣಮಟ್ಟ ಮತ್ತು ಗ್ರಾಹಕರ ನಂಬಿಕೆ ಉಳಿಸಿಕೊಂಡಿದೆ. ಎಲೆಕ್ಟ್ರಾನಿಕ್‌ ವಲಯದಲ್ಲಿ ಭಾರತದ ಸ್ವಾವಲಂಬನೆಯನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸುವುದೇ ಈ ಘಟಕದ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ. 

‘ಬಿಪಿಎಲ್‌ ಕಂಪನಿಯು 1989ರಿಂದಲೂ ಜಪಾನ್‌ನ ಸ್ಯಾಯೊ ಕಂಪನಿಯ ತಾಂತ್ರಿಕ ನೆರವಿನಡಿ ಪಿಸಿಬಿ ಉತ್ಪಾದನೆಯಲ್ಲಿ ತೊಡಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಘಟಕವನ್ನು ಮೇಲ್ದರ್ಜೆಗೇರಿಸಲು ₹15 ಕೋಟಿ ವಿನಿಯೋಗಿಸಲಾಗಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಗುಣಮಟ್ಟದ ಸೇವೆ ಒದಗಿಸಲು ಕಂಪನಿಯು ಬದ್ಧವಾಗಿದೆ’ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಪಿಸಿಬಿ ಮಾರುಕಟ್ಟೆಯು ಬೆಳವಣಿಗೆ ಕಾಣುತ್ತಿದೆ. 2032ರ ವೇಳೆಗೆ ಈ ವಲಯವು ಶೇ 18.1ರಷ್ಟು ಬೆಳವಣಿಗೆ ದಾಖಲಿಸಲಿದ್ದು, ಮಾರುಕಟ್ಟೆ ಮೌಲ್ಯವು ₹1.68 ಲಕ್ಷ ಕೋಟಿಗೆ ತಲುಪಲಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT