ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಸ್‌ಇಗೆ ಕರ್ನಾಟಕದ ಕ್ಯಾನರಿಸ್‌ ಆಟೊಮೇಷನ್‌ ಕಂಪನಿ

Published 17 ಅಕ್ಟೋಬರ್ 2023, 16:35 IST
Last Updated 17 ಅಕ್ಟೋಬರ್ 2023, 16:35 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಕನ್ನಡಿಗರ ಮಾಲೀಕತ್ವದ ಕ್ಯಾನರಿಸ್ ಆಟೋಮೇಷನ್ಸ್ ಲಿಮಿಟೆಡ್ ಕಂಪನಿಯು  ರಾಷ್ಟ್ರೀಯ ಷೇರು ಸೂಚ್ಯಂಕ (ಎನ್ಎಸ್ಇ) ವೇದಿಕೆ ಸೇರಿದ್ದು, ಷೇರು ಮಾರುಕಟ್ಟೆಯಲ್ಲಿ ವಹಿವಾಟು ಆರಂಭಿಸಿದೆ.

ಕಂಪನಿಯ ಪೂರ್ಣಾವಧಿ ನಿರ್ದೇಶಕ ರಘು ಚಂದ್ರಶೇಖರಯ್ಯ, ಅಧ್ಯಕ್ಷ ರಾಮನ್‌ ಸುಬ್ಬಾರಾವ್‌, ಸಿಇಒ ಶೇಷಾದ್ರಿ ಶ್ರೀನಿವಾಸ್‌, ಸ್ವತಂತ್ರ ನಿರ್ದೇಶಕ ಮುರಳಿಕೃಷ್ಣ ಹಾಗೂ ಎನ್‌ಎಸ್‌ಇನ ಉಪಾಧ್ಯಕ್ಷ ಗೌರಿ ಶಂಕರ್‌ ಅವರ ಸಮುಖದಲ್ಲಿ ಕಂಪನಿಯು ಷೇರು ವಹಿವಾಟಿಗೆ ಸೇರ್ಪಡೆ ಆಯಿತು.

‘2025ರ ಮಾರ್ಚ್‌ ವೇಳೆಗೆ ಷೇರು ಮಾರುಕಟ್ಟೆ ಪ್ರವೇಶಿಸಲು 2022 ರಲ್ಲಿ ಗುರಿ ನಿಗದಿಪಡಿಸಲಾಗಿತ್ತು. ಆದರೂ ಎರಡು ವರ್ಷಗಳ ಮುಂಚೆ ಈ ಸಾಧನೆ ಮಾಡಿದ್ದು, ಇದಕ್ಕೆ ಕಂಪನಿಯ ಎಲ್ಲರ ಸಹಕಾರ ಕಾರಣವಾಗಿದೆ ಎಂದು ಕ್ಯಾನರಿಸ್ ಆಟೋಮೇಷನ್ಸ್ ಲಿಮಿಟೆಡ್‌ನ ಸಿಇಒ ಶೇಷಾದ್ರಿ ಶ್ರೀನಿವಾಸ್‌ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT