ನವದೆಹಲಿ: ಸೀಲಿಂಗ್ ಫ್ಯಾನ್‌ಗಳಲ್ಲಿ ವಿದ್ಯುತ್ ಉಳಿತಾಯದ ಕ್ಷಮತೆಯನ್ನು ಸೂಚಿಸುವ ಸ್ಟಾರ್ ರೇಟಿಂಗ್ ನಮೂದಿಸುವುದನ್ನು ಇಂಧನ ಕ್ಷಮತೆ ಬ್ಯೂರೊ (ಬಿಇಇ) ಜನವರಿ 1ರಿಂದ ಕಡ್ಡಾಯ ಮಾಡಿದೆ. ಹೀಗಾಗಿ ಸೀಲಿಂಗ್ ಫ್ಯಾನ್‌ಗಳ ಬೆಲೆಯು ಶೇಕಡ 8–10ರವರೆಗೆ ಏರಿಕೆ ಆಗುವ ನಿರೀಕ್ಷೆ ಮಾಡಲಾಗಿದೆ.
ಕಂಪನಿಗಳು ತಮ್ಮ ಫ್ಯಾನ್‌ಗಳ ಮೇಲೆ 1ರಿಂದ 5ರವರೆಗೆ ಸ್ಟಾರ್ ರೇಟಿಂಗ್ಸ್ ನಮೂದಿಸಬೇಕು. 1 ಸ್ಟಾರ್ ರೇಟಿಂಗ್ ಹೊಂದಿದ್ದರೆ ಅದು ಕನಿಷ್ಠ ಶೇ 30ರಷ್ಟು ವಿದ್ಯುತ್ ಉಳಿತಾಯ ಮಾಡುತ್ತದೆ. 5 ಸ್ಟಾರ್ ರೇಟಿಂಗ್ ಹೊಂದಿದ್ದರೆ ಶೇ 50ಕ್ಕೂ ಅಧಿಕ ವಿದ್ಯುತ್ ಉಳಿತಾಯ ಮಾಡುವ ಕ್ಷಮತೆ ಹೊಂದಿರುತ್ತದೆ.
ಹ್ಯಾವೆಲ್ಸ್, ಓರಿಯಂಟ್ ಎಲೆಕ್ಟ್ರಿಕ್ ಮತ್ತು ಉಷಾ ಇಂಟರ್‌ನ್ಯಾಷನಲ್ ಕಂಪನಿಗಳು ಈ ನಿರ್ಧಾರವನ್ನು ಸ್ವಾಗತಿಸಿವೆ. ಆದರೆ, 5 ಸ್ಟಾರ್ ಹೊಂದಿರುವ ಫ್ಯಾನ್‌ಗಳಿಗೆ ಬಳಸುವ ಮೋಟರ್ ಮತ್ತು ಎಲೆಕ್ಟ್ರಾನಿಕ್ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳಬೇಕಾಗಿರುವುದರಿಂದ ತಯಾರಿಕಾ ವೆಚ್ಚವು ಶೇ 5–20ರವರೆಗೂ ಹೆಚ್ಚಾಗಲಿದೆ ಎಂದು ಹೇಳಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.