ಭಾನುವಾರ, ಜನವರಿ 26, 2020
27 °C

ಫೆ.3ರಿಂದ ಸಿಡಿಇಎಲ್‌ ವಹಿವಾಟು ಅಮಾನತು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ : ಫೆಬ್ರುವರಿ 3ರಿಂದ ಜಾರಿಗೆ ಬರುವಂತೆ ಕಾಫಿ ಡೇ ಎಂಟರ್‌ಪ್ರೈಸಸ್‌ ಲಿಮಿಟೆಡ್‌ (ಸಿಡಿಐಎಲ್‌), ಸಿಜಿ ಪವರ್ ಮತ್ತು ಇಂಡಸ್ಟ್ರಿಯಲ್‌ ಸಲ್ಯೂಷನ್ಸ್‌ ಕಂಪನಿಗಳ ಷೇರು ವಹಿವಾಟನ್ನು ಅಮಾನತಿನಲ್ಲಿ ಇಡಲಾಗುವುದು ಎಂದು ಮುಂಬೈ ಮತ್ತು ರಾಷ್ಟ್ರೀಯ ಷೇರುಪೇಟೆಗಳು ತಿಳಿಸಿವೆ.

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ನಿಯಮದಂತೆ ನೋಂದಾಯಿಸಿಕೊಂಡಿರುವ ಕಂಪನಿಗಳು ತಮ್ಮ ಹಣಕಾಸು ವರದಿ ಸಲ್ಲಿಸುವುದು ಕಡ್ಡಾಯವಾಗಿದೆ. ಆದರೆ, ಈ ಕಂಪನಿಗಳು ಮುಂಬೈ ಮತ್ತು ರಾಷ್ಟ್ರೀಯ ಷೇರುಪೇಟೆಗಳಿಗೆ ‌2019ರ ಜೂನ್‌ ಮತ್ತು ಸೆಪ್ಟೆಂಬರ್ ತ್ರೈಮಾಸಿಕ
ಗಳ ಹಣಕಾಸು ವರದಿಯನ್ನು ಸಲ್ಲಿಸಿಲ್ಲ. ಹೀಗಾಗಿ ಈ ಕ್ರಮ ಕೈಗೊಳ್ಳಳಾಗಿದೆ. ಜನವರಿ 29ರ ಒಳಗಾಗಿ ಹಣಕಾಸು ವರದಿ ಸಲ್ಲಿಸಿದರೆ ಅಮಾನತಿಗೆ ಒಳಗಾಗು
ವುದಿಲ್ಲ ಎಂದು ಷೇರುಪೇಟೆಗಳು ತಿಳಿಸಿವೆ. ಜನವರಿ 10ರಿಂದಲೇ ಪ್ರವರ್ತಕರ ಷೇರುಗಳನ್ನು ಮುಂದಿನ ಆದೇಶದವರೆಗೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದೂ ಹೇಳಿವೆ.

ಷೇರು ಬೆಲೆ ಇಳಿಕೆ:  ವಹಿವಾಟಿನಿಂದ ಅಮಾನತುಗೊಳಿಸುವ ಘೋಷಣೆ ಹೊರ
ಬೀಳುತ್ತಿದ್ದಂತೆಯೇ ಈ ಕಂಪನಿಗಳ ಷೇರು ಬೆಲೆ ಶೇ 5ರವರೆಗೂ ಇಳಿಕೆ ಕಂಡಿದೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು