ಸೈಬರ್‌ ದಾಳಿ ಪರಿಣಾಮ ಬೀರದು: ವಿಪ್ರೊ

ಶನಿವಾರ, ಮೇ 25, 2019
27 °C

ಸೈಬರ್‌ ದಾಳಿ ಪರಿಣಾಮ ಬೀರದು: ವಿಪ್ರೊ

Published:
Updated:
Prajavani

ನವದೆಹಲಿ: ತನ್ನ ಕೆಲವು ಉದ್ಯೋಗಿಗಳ ಖಾತೆಗಳ ಮೇಲೆ ನಡೆದಿರುವ ಸೈಬರ್‌ ದಾಳಿಯಿಂದ ಸಂಸ್ಥೆಯ ಸೂಕ್ಷ್ಮ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿಲ್ಲ ಎಂದು ಐ.ಟಿ ದೈತ್ಯ ಸಂಸ್ಥೆ ವಿಪ್ರೊ ತಿಳಿಸಿದೆ.

10 ದಿನಗಳ ಹಿಂದೆ ತನ್ನ ಕೆಲ ಸಿಬ್ಬಂದಿಯ ಖಾತೆಯಲ್ಲಿ ಅಸಾಮಾನ್ಯ ಚಟುವಟಿಕೆ ಕಂಡು ಬಂದಿರುವುದು ಗಮನಕ್ಕೆ ಬಂದಿತ್ತು. ವೈಯಕ್ತಿಕ ಮಾಹಿತಿ ಕದಿಯುವ ಇ–ಮೇಲ್‌ ಸಂಚಿನ ಸುಳಿವು ಸಿಗುತ್ತಿದ್ದಂತೆ ಅದನ್ನು ವಿಫಲಗೊಳಿಸುವ ಕಾರ್ಯತಂತ್ರವನ್ನು ತಕ್ಷಣಕ್ಕೆ ಅಳವಡಿಸಿಕೊಳ್ಳಲಾಗಿತ್ತು.

ಈ ಬಗ್ಗೆ ತನಿಖೆ ನಡೆಸಿ ದಾಳಿಗೆ ಒಳಗಾದ ಸಿಬ್ಬಂದಿಯ ಖಾತೆಗಳನ್ನು ಗುರುತಿಸಿ ಪ್ರತ್ಯೇಕಿಸಲಾಯಿತು. ದಾಳಿಯ ತೀವ್ರತೆ ತಗ್ಗಿಸಲು ಆದ್ಯತೆ ಮೇರೆಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಈ ಘಟನೆಯು ಸಂಸ್ಥೆಯ ವಹಿವಾಟಿನ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ವಿಪ್ರೊದ ಕಂಪ್ಯೂಟರ್‌ ಸಿಸ್ಟಮ್‌ ಅನ್ನು ಸೈಬರ್‌ ದಾಳಿಕೋರರು ಭೇದಿಸಿದ್ದು, ಅದರ ಕೆಲ ಗ್ರಾಹಕರ ವಿರುದ್ಧ  ದಾಳಿ ನಡೆಸಲು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಸೈಬರ್‌ ಸುರಕ್ಷತೆಗೆ ಸಂಬಂಧಿಸಿದ ಬ್ಲಾಗ್‌ ಕ್ರೆಬ್ಸ್‌ಆನ್‌ಸೆಕ್ಯುರಿಟಿ ಹೇಳಿಕೊಂಡಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !