ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಿದ್ದಲು ಬಳಕೆಯ ವಿದ್ಯುತ್‌ ವಲಯ: ಉತ್ಪಾದನೆ ಶೇ 8.38ರಷ್ಟು ಹೆಚ್ಚಳ

ದೇಶೀಯ ಕಲ್ಲಿದ್ದಲು ಬಳಕೆಯ ವಿದ್ಯುತ್‌ ವಲಯ
Published 23 ಡಿಸೆಂಬರ್ 2023, 15:30 IST
Last Updated 23 ಡಿಸೆಂಬರ್ 2023, 15:30 IST
ಅಕ್ಷರ ಗಾತ್ರ

ನವದೆಹಲಿ : ದೇಶೀಯವಾಗಿ ಉತ್ಪಾದಿಸುವ ಕಲ್ಲಿದ್ದಲು ಬಳಸುವ ವಿದ್ಯುತ್‌ ವಲಯದ ಉತ್ಪಾದನೆಯು ಶೇ 8.38ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಕಲ್ಲಿದ್ದಲು ಸಚಿವಾಲಯ ತಿಳಿಸಿದೆ.  

ಪ್ರಸಕ್ತ ವರ್ಷದ ಏಪ್ರಿಲ್‌ನಿಂದ ನವೆಂಬರ್‌ವರೆಗೆ ಒಟ್ಟು 77,900 ಕೋಟಿ ಯೂನಿಟ್‌ನಷ್ಟು ವಿದ್ಯುತ್‌ ಉತ್ಪಾದಿಸಲಾಗಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ 71,883 ಕೋಟಿ ಯೂನಿಟ್‌ ಉತ್ಪಾದನೆಯಾಗಿತ್ತು. ವರ್ಷದಿಂದ ವರ್ಷಕ್ಕೆ ಈ ವಲಯದಲ್ಲಿ ಉತ್ಪಾದನಾ ಪ್ರಮಾಣ ಹೆಚ್ಚುತ್ತಿದೆ ಎಂದು ವಿವರಿಸಿದೆ.

ಇದೇ ಅವಧಿಯಲ್ಲಿ ದೇಶದ ವಿದ್ಯುತ್‌ ಉತ್ಪಾದನೆಯು ಶೇ 7.71ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದೆ.

ಉತ್ತರ ಭಾರತದಲ್ಲಿ ತಾಪಮಾನ ಹೆಚ್ಚಳ, ಮುಂಗಾರು ಹಂಗಾಮು ಹಿನ್ನಡೆ ಸೇರಿದಂತೆ ಕೋವಿಡ್‌ ನಂತರ ಹೆಚ್ಚಾದ ಉತ್ಪಾದನಾ ಚಟುವಟಿಕೆಯಿಂದಾಗಿ ದೇಶದಲ್ಲಿ ಇರುವ ಕಲ್ಲಿದ್ದಲು ಆಧಾರಿತ ವಿದ್ಯುತ್‌ ಸ್ಥಾವರಗಳಲ್ಲಿನ ಉತ್ಪಾದನೆಯು ಶೇ 11.19ರಷ್ಟು ಹೆಚ್ಚಳವಾಗಿತ್ತು ಎಂದು ಹೇಳಿದೆ.

ದೇಶದಲ್ಲಿ ವಿದ್ಯುತ್‌ ಬೇಡಿಕೆ ಹೆಚ್ಚುತ್ತಿದೆ. ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಬಳಸುವ ಕಲ್ಲಿದ್ದಲಿನಲ್ಲಿ ಶೇ 6ರಷ್ಟು ಆಮದು ಕಲ್ಲಿದ್ದಲನ್ನು ಕಡ್ಡಾಯವಾಗಿ ಮಿಶ್ರಣ ಮಾಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

ಆದರೂ, ಪ್ರಸಕ್ತ ನವೆಂಬರ್‌ನಲ್ಲಿ ಆಮದು ಕಲ್ಲಿದ್ದಲು ಶೇ 44.28ರಷ್ಟು ಅಂದರೆ 15.16 ದಶಲಕ್ಷ ಟನ್‌ಗೆ ಇಳಿದಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ 27.21 ದಶಲಕ್ಷ ಟನ್‌ ಇತ್ತು ಎಂದು ವಿವರಿಸಿದೆ.

ಆಮದು ಕಲ್ಲಿದ್ದಲು ಇಳಕೆಯಾಗಿರುವುದು ದೇಶೀಯ ಕಲ್ಲಿದ್ದಲು ಉತ್ಪಾದನೆಯಲ್ಲಿ ಸಾಧಿಸಿರುವ ಸ್ವಾವಲಂಬನೆಗೆ ನಿದರ್ಶನವಾಗಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT