ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Federal Bank: ಫೆಡರಲ್‌ ಬ್ಯಾಂಕ್‌ ನೀಡಿದ ಸಾಲ ಏರಿಕೆ

Published 3 ಜುಲೈ 2024, 14:23 IST
Last Updated 3 ಜುಲೈ 2024, 14:23 IST
ಅಕ್ಷರ ಗಾತ್ರ

ನವದೆಹಲಿ: ಖಾಸಗಿ ವಲಯದ ಫೆಡರಲ್‌ ಬ್ಯಾಂಕ್‌ 2024–25ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ನೀಡಿದ ಸಾಲದ ಪ್ರಮಾಣದಲ್ಲಿ ಶೇ 20ರಷ್ಟು ಏರಿಕೆಯಾಗಿದೆ. ಸಾಲದ ಮೊತ್ತವು ₹2.24 ಲಕ್ಷ ಕೋಟಿ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಒಟ್ಟು ಮುಂಗಡವು (ಸಾಲ) ₹1.86 ಲಕ್ಷ ಕೋಟಿಯಾಗಿತ್ತು ಎಂದು ಷೇರುಪೇಟೆಗೆ  ಬ್ಯಾಂಕ್‌ ಬುಧವಾರ ತಿಳಿಸಿದೆ.

ಚಿಲ್ಲರೆ ಸಾಲದ ಪುಸ್ತಕ ಶೇ 25ರಷ್ಟು ಮತ್ತು ಸಗಟು ಸಾಲದ ಪುಸ್ತಕವು ಶೇ 14ರಷ್ಟು ಬೆಳವಣಿಗೆಯಾಗಿದ್ದು, ಅನುಪಾತವು ಕ್ರಮವಾಗಿ 56:44 ಆಗಿದೆ.

ಬ್ಯಾಂಕ್‌ನ ಠೇವಣಿಯು ₹2.22 ಲಕ್ಷ ಕೋಟಿಯಿಂದ ₹2.66 ಲಕ್ಷ ಕೋಟಿಗೆ ಏರಿಕೆಯಾಗಿದೆ. ಠೇವಣಿ ಶೇ 20ರಷ್ಟು ಹೆಚ್ಚಳ ಕಂಡಿದೆ. ಚಾಲ್ತಿ ಖಾತೆ ಮತ್ತು ಉಳಿತಾಯ ಠೇವಣಿಯು (ಸಿಎಎಸ್‌ಎ) ಶೇ 31 ರಿಂದ ಶೇ 29ಕ್ಕೆ ಇಳಿದಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT