ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಎಸ್‌ಎಂಇಗೆ ನೆರವು: ರೆಬೆಲ್‌ಕಾರ್ಪ್‌–ಎಫ್‌ಐಇಒ ಒಪ್ಪಂದ

Last Updated 8 ಜನವರಿ 2022, 10:32 IST
ಅಕ್ಷರ ಗಾತ್ರ

ನವದೆಹಲಿ:ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಕಡಿಮೆ ಬೆಲೆಯಲ್ಲಿ ತಮ್ಮದೇ ಆದ ಜಾಲತಾಣ ರೂಪಿಸಿಕೊಳ್ಳಲು ಮತ್ತು ವಹಿವಾಟು ವಿಸ್ತರಣೆ ಮಾಡಿಕೊಳ್ಳಲು ಅನುಕೂಲ ಆಗುವಂತೆ ಡಿಜಿಟಲ್‌ ವೇದಿಕೆಯನ್ನು ಒದಗಿಸುವ ರೆಬೆಲ್‌ಕಾರ್ಪ್‌ ಕಂಪನಿಯೊಂದಿಗೆ ಭಾರತೀಯ ರಫ್ತುದಾರರ ಸಂಘಟನೆಗಳ ಒಕ್ಕೂಟ (ಎಫ್‌ಐಇಒ) ಒಪ್ಪಂದ ಮಾಡಿಕೊಂಡಿದೆ.

ರಫ್ತುದಾರರು ಸುಲಭವಾಗಿ ನಿರ್ವಹಿಸಬಹುದಾದ ಜಾಲತಾಣ ರೂಪಿಸಲು ಸಹಾಯ ಮಾಡಲಾಗುವುದು ಎಂದು ಮುಂಬೈನ ರೆಬೆಲ್‌ಕಾರ್ಪ್‌ ನವೋದ್ಯಮದ ಸ್ಥಾಪಕ ಸಾದ್‌ ಖಾನ್‌ ತಿಳಿಸಿದ್ದಾರೆ.

ಕೋವಿಡ್‌ ಸಾಂಕ್ರಾಮಿಕದಿಂದಾಗಿ ಜಗತ್ತು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವ ಈ ಸಮಯದಲ್ಲಿ, ನಮ್ಮ ಉತ್ಪನ್ನವು ಎಂಎಸ್‌ಎಂಇ ವಲಯಕ್ಕೆ ತಮ್ಮದೇ ಆದ ಜಾತಲಾಣಗಳನ್ನು ರೂಪಿಸಲು ಮತ್ತು ಜಾಗತಿಕ ಮಾರುಕಟ್ಟೆಯನ್ನು ತಲುಪಲು ಸಹಾಯ ಮಾಡಲಿದೆ ಎಂದು ಅವರು ಹೇಳಿದ್ದಾರೆ. ಒಕ್ಕೂಟದಲ್ಲಿ ಇರುವ ಸದಸ್ಯರಿಗೆ ತಮ್ಮ ವೆಬ್‌ಸೈಟ್‌ಗಳನ್ನು ಸುಲಭವಾಗಿ ನಿರ್ವಹಿಸಲು ಆಗುವಂತೆ ಕಾರ್ಯಾಗಾರಗಳು ಮತ್ತು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಈ ಉಪಕ್ರಮವು ರಫ್ತುದಾರರಿಗೆ ವಿವಿಧ ದೇಶಗಳಲ್ಲಿ ತಮ್ಮ ವ್ಯವಹಾರಗಳನ್ನು ಪ್ರಸ್ತುತ ಪಡಿಸಲು ಸಹಾಯ ಮಾಡಲಿದೆ ಎಂದು ಒಕ್ಕೂಟದ ಪಶ್ಚಿಮ ವಲಯದ ಪ್ರಾದೇಶಿಕ ಮುಖ್ಯಸ್ಥೆ ಸುಜಾತಾ ಉಚ್ಛಿಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT