ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಬೇರ: 50ನೇ ಸ್ಥಾನಕ್ಕೆ ಜೋಯ್‌ ಅಲುಕ್ಕಾಸ್‌

Published 14 ಅಕ್ಟೋಬರ್ 2023, 15:32 IST
Last Updated 14 ಅಕ್ಟೋಬರ್ 2023, 15:32 IST
ಅಕ್ಷರ ಗಾತ್ರ

ಬೆಂಗಳೂರು: ಜೋಯಾಲುಕ್ಕಾಸ್ ಸಮೂಹದ ಅಧ್ಯಕ್ಷ ಜೋಯ್‌ ಅಲುಕ್ಕಾಸ್‌ ಅವರು ಫೋಬ್ಸ್‌ ನಿಯತಕಾಲಿಕ ಈಚೆಗೆ ಬಿಡುಗಡೆ ಮಾಡಿರುವ 2023ರ ಭಾರತದ 100 ಸಿರಿವಂತರ ಪಟ್ಟಿಯಲ್ಲಿ 50ನೇ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಸಮೂಹವು ತಿಳಿಸಿದೆ. 

ಸಿರಿವಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ದೇಶದ ಏಕೈಕ ಚಿನ್ನಾಭರಣ ಉದ್ಯಮಿ ಎನ್ನುವ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. 2022ರಲ್ಲಿ ಸಿರಿವಂತರ ಪಟ್ಟಿಯಲ್ಲಿ 69ನೇ ಸ್ಥಾನದಲ್ಲಿ ಇದ್ದರು ಎಂದು ಸಮೂಹವು ಹೇಳಿದೆ.

ಹಲವು ರಿಟೇಲ್‌ ಮಳಿಗೆಗಳನ್ನು ತೆರೆಯುವುದು, ಸಂಘಟಿತವಾದ ರಿಟೇಲ್‌ ಕಾರ್ಯಾಚರಣೆ ಮತ್ತು ದೊಡ್ಡ ಗಾತ್ರದ ಮಳಿಗೆಗಳ ಮೂಲಕ ಭಾರತದ ಚಿನ್ನಾಭರಣ ವಲಯವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಅವರು ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT