ರೇಮಂಡ್ಸ್‌: ಗೌತಮ್‌ ಪದತ್ಯಾಗ

7

ರೇಮಂಡ್ಸ್‌: ಗೌತಮ್‌ ಪದತ್ಯಾಗ

Published:
Updated:
Deccan Herald

ಮುಂಬೈ: ರೇಮಂಡ್‌ ಅಪೆರಲ್ ಲಿಮಿಟೆಡ್‌ನ ಅಧ್ಯಕ್ಷ ಹುದ್ದೆಗೆ ಗೌತಮ್ ಸಿಂಘಾನಿಯಾ ಅವರು ರಾಜೀನಾಮೆ ಸಲ್ಲಿಸಿದ್ದಾರೆ.

ಸಂಸ್ಥೆಯನ್ನು ಹೆಚ್ಚು ವೃತ್ತಿಪರತೆಯಿಂದ ನಿರ್ವಹಿಸುವ ಉದ್ದೇಶದಿಂದ ನಿರ್ವಿಕ್‌ ಸಿಂಗ್‌  (27) ಅವರನ್ನು ಸಂಸ್ಥೆಯ ಕಾರ್ಯನಿರ್ವಾಹಕಯೇತರ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಗೌತಮ್‌ ಅವರು ನಿರ್ದೇಶಕ ಮಂಡಳಿಯ ಸದಸ್ಯರಾಗಿ ಮುಂದುವರೆಯಲಿದ್ದಾರೆ. ಅನ್ಶು ಸರಿನ್‌ ಮತ್ತು ಗೌತಮ್‌ ತ್ರಿವೇದಿ ಅವರನ್ನು ಮಂಡಳಿಯ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.

ಗೌತಮ್‌ ಅವರ ತಂದೆ ವಿಜಯಪತ್‌ ಸಿಂಘಾನಿಯಾ ಅವರನ್ನು ಇತ್ತೀಚೆಗೆ ರೇಮಂಡ್‌ ಸಮೂಹದ ಗೌರವ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿತ್ತು. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !