ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Gold Price: 10 ಗ್ರಾಂ ಚಿನ್ನದ ದರ ₹400 ಇಳಿಕೆ

ಬೆಳ್ಳಿ ದರ ಏರಿಕೆ
Published 31 ಅಕ್ಟೋಬರ್ 2023, 15:44 IST
Last Updated 1 ನವೆಂಬರ್ 2023, 4:51 IST
ಅಕ್ಷರ ಗಾತ್ರ

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಮಂಗಳವಾರ ಚಿನ್ನದ ಬೆಲೆ ಇಳಿಕೆಯಾಗಿದ್ದರೆ, ಬೆಳ್ಳಿ ದರ ಏರಿಕೆ ಕಂಡಿದೆ. ಚಿನ್ನದ ದರ 10 ಗ್ರಾಂಗೆ ₹400 ಇಳಿಕೆ ಕಂಡು, ₹62,050ರಂತೆ ಮಾರಾಟವಾಯಿತು. 

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಕೆ ಆಗಿದ್ದು, ದೇಶಿ ಮಾರುಕಟ್ಟೆಯ ಮೇಲೆಯೂ ಪರಿಣಾಮ ಬೀರಿತು ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ತಿಳಿಸಿದೆ.

ಬೆಳ್ಳಿ ಧಾರಣೆ ಕೆ.ಜಿಗೆ ₹300 ಏರಿಕೆಯಾಗಿ ₹75,500ಕ್ಕೆ ತಲುಪಿತು.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಒಂದು ಔನ್ಸ್‌ಗೆ (28.34 ಗ್ರಾಂ) 1,993 ಡಾಲರ್‌ ಇಳಿದಿದ್ದರೆ, ಬೆಳ್ಳಿ ಒಂದು ಔನ್ಸ್‌ಗೆ 23.12 ಡಾಲರ್‌ನಂತೆ ಏರಿಕೆಯಾಗಿ ಮಾರಾಟವಾಗಿದೆ.

ಗೇಲ್‌ ಲಾಭ ಶೇ 65ರಷ್ಟು ಹೆಚ್ಚಳ

ನವದೆಹಲಿ (ಪಿಟಿಐ): ಗೇಲ್‌ ಇಂಡಿಯಾ ಲಿಮಿಟೆಡ್‌ನ ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇ 65ರಷ್ಟು ಹೆಚ್ಚಾಗಿದ್ದು, ₹ 2,404 ಕೋಟಿಗೆ ತಲುಪಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ನಿವ್ವಳ ಲಾಭ ₹1,537 ಕೋಟಿ ಇತ್ತು ಎಂದು ಕಂಪನಿಯು ಮಂಗಳವಾರ ಷೇರುಪೇಟೆಗೆ ಮಾಹಿತಿ ನೀಡಿದೆ. ಅನಿಲ ದರ ಇಳಿಕೆಯಿಂದ ಅದರ ಕಾರ್ಯಾಚರಣೆ ವರಮಾನವು ₹38,490.89 ಕೋಟಿಯಿಂದ ₹31,882 ಕೋಟಿಗೆ ಇಳಿದಿದೆ.

ಏರ್‌ಟೆಲ್‌ ಲಾಭ ಶೇ 37ರಷ್ಟು ಇಳಿಕೆ

ನವದೆಹಲಿ (ಪಿಟಿಐ): ಭಾರ್ತಿ ಏರ್‌ಟೆಲ್‌ ಕಂಪನಿಯ ನಿವ್ವಳ ಲಾಭವು ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇ 37.5ರಷ್ಟು ಇಳಿಕೆ ಕಂಡು ₹1,341 ಕೋಟಿಗೆ ತಲುಪಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ನಿವ್ವಳ ಲಾಭ ₹2,145 ಕೋಟಿಯಷ್ಟು ಇತ್ತು ಎಂದು ಕಂಪನಿಯು ತಿಳಿಸಿದೆ. ನಿವ್ವಳ ಆದಾಯ ಶೇ 44.2ರಷ್ಟು ಹೆಚ್ಚಾಗಿ ₹2,960 ಕೋಟಿಯಷ್ಟು ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT