ಮಂಗಳವಾರ, ಸೆಪ್ಟೆಂಬರ್ 24, 2019
29 °C

ಚಿನ್ನದ ಬೆಲೆ ಇಳಿಕೆ

Published:
Updated:

ನವದೆಹಲಿ: ಚಿನಿವಾರ ಪೇಟೆಯಲ್ಲಿ ಚಿನ್ನದ ಧಾರಣೆ 10 ಗ್ರಾಂಗೆ ₹ 300ರಂತೆ ಇಳಿಕೆಯಾಗಿ ₹39,225ಕ್ಕೆ ತಲುಪಿದೆ.

ಬೆಳ್ಳಿ ಧಾರಣೆ ಕೆ.ಜಿಗೆ ₹ 1,400ರಂತೆ ಕಡಿಮೆಯಾಗಿ ₹ 48,500ರಂತೆ ಮಾರಾಟ ವಾಯಿತು. ಬೇಡಿಕೆ ಇಲ್ಲದೇ ಇರುವುದು ಮತ್ತು ರೂಪಾಯಿ ಮೌಲ್ಯದಲ್ಲಿ ಆಗುತ್ತಿರುವ ವ್ಯತ್ಯಯದಿಂದ ಬೆಲೆಯಲ್ಲಿಯೂ ಏರಿಳಿತ ಆಗುತ್ತಿದೆ ಎಂದು ವರ್ತಕರು ಹೇಳಿದ್ದಾರೆ.

‘ಚಿನ್ನದ ಬೆಲೆಗಳು ಗರಿಷ್ಠ ಮಟ್ಟದಲ್ಲಿ ಇವೆ. ಹೀಗಾಗಿ ಹಬ್ಬದ ಬೇಡಿಕೆ ಇನ್ನೂ ಸೃಷ್ಟಿಯಾಗಿಲ್ಲ’ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ತಪನ್‌ ಪಟೇಲ್‌ ತಿಳಿಸಿದ್ದಾರೆ.

Post Comments (+)