ಗುರುವಾರ , ಅಕ್ಟೋಬರ್ 1, 2020
26 °C

ಚಿನ್ನ, ಬೆಳ್ಳಿ ದರ ಗರಿಷ್ಠ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

ಚಿನ್ನ, ಬೆಳ್ಳಿ

ನವದೆಹಲಿ/ಮುಂಬೈ: ದೇಶದಾದ್ಯಂತ ಚಿನ್ನ ಬೆಳ್ಳಿ ಧಾರಣೆ ಬುಧವಾರ ಗರಿಷ್ಠ ಏರಿಕೆ ಕಂಡಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನ ₹ 1,365ರಂತೆ ಹೆಚ್ಚಾಗಿದ್ದು, ₹ 56,181ಕ್ಕೆ ತಲುಪಿತು. ಬೆಳ್ಳಿ ಧಾರಣೆ ಕೆ.ಜಿ.ಗೆ ₹ 5,972ರಂತೆ ಹೆಚ್ಚಾಗಿ ₹ 72,726ಕ್ಕೆ ಏರಿಕೆಯಾಗಿದೆ

ಬೆಂಗಳೂರಿನಲ್ಲಿ 10ಗ್ರಾಂ ಚಿನ್ನ ₹ 1,270ರಷ್ಟು ಹೆಚ್ಚಳವಾಗಿ ₹ 55,450ರಂತೆ ಮಾರಾಟವಾಗಿದೆ. ಬೆಳ್ಳಿ ಧಾರಣೆ ಕೆ.ಜಿ.ಗೆ ₹ 6,200ರಂತೆ ಹೆಚ್ಚಾಗಿ ₹ 72,200ಕ್ಕೆ ತಲುಪಿದೆ.

ಇನ್ನು ಮುಂಬೈನಲ್ಲಿ ಚಿನ್ನದ ದರ 10 ಗ್ರಾಂಗೆ ₹ 53,788 ಇದ್ದಿದ್ದು ₹ 55,226ಕ್ಕೆ ಏರಿಕೆ ಆಯಿತು. ಅಂದರೆ ಪ್ರತಿ 10 ಗ್ರಾಂಗೆ ₹ 1,438 ಏರಿಕೆ ಆಗಿದೆ. ಬೆಳ್ಳಿ ಧಾರಣೆಯು ಕೆ.ಜಿಗೆ ₹6,465ರಂತೆ ಹೆಚ್ಚಾಗಿದ್ದು ₹ 71,200ಕ್ಕೆ ತಲುಪಿದೆ.

ಡಾಲರ್‌ ಮೌಲ್ಯ ಇಳಿಕೆ ಆಗಿರುವುದು ಮತ್ತು ಕೋವಿಡ್-19‌ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಆರ್ಥಿಕ ಬೆಳವಣಿಗೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. ಇದರಿಂದಾಗಿ ಚಿನ್ನದ ದರ ಹೊಸ ಎತ್ತರಕ್ಕೆ ಏರಿಕೆಯಾಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೆಷಕ ತಪನ್‌ ಪಟೇಲ್‌ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.