ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ದರ 10 ಗ್ರಾಂಗೆ ₹150 ಹೆಚ್ಚಳ: ಬೆಳ್ಳಿ ದರ ₹1,400 ಇಳಿಕೆ

Published 11 ಜೂನ್ 2024, 14:26 IST
Last Updated 11 ಜೂನ್ 2024, 14:26 IST
ಅಕ್ಷರ ಗಾತ್ರ

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಮಂಗಳವಾರ ಚಿನ್ನದ ಬೆಲೆ ಏರಿಕೆಯಾಗಿದ್ದರೆ, ಬೆಳ್ಳಿ ಧಾರಣೆ ಇಳಿಕೆ ಕಂಡಿದೆ.

ಬೆಳ್ಳಿ ದರವು ಕೆ.ಜಿಗೆ ₹1,400 ಕಡಿಮೆಯಾಗಿ, ₹90,700 ಆಗಿದೆ. ಚಿನ್ನದ ದರವು 10 ಗ್ರಾಂಗೆ ₹150 ಹೆಚ್ಚಳವಾಗಿ ₹71,950ಕ್ಕೆ ಮಾರಾಟವಾಗಿದೆ.

‘ಅಮೆರಿಕದ ಬಾಂಡ್‌ ಗಳಿಕೆಯಲ್ಲಿ ಇಳಿಕೆಯಾಗಿದೆ. ಡಾಲರ್‌ ಮೌಲ್ಯ ಕುಸಿತಗೊಂಡಿದೆ. ಹಾಗಾಗಿ, ಚಿನ್ನದ ದರದಲ್ಲಿ ಏರಿಕೆಯಾಗಿದೆ’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ತಿಳಿಸಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಒಂದು ಔನ್ಸ್‌ಗೆ (28.34 ಗ್ರಾಂ) ಕ್ರಮವಾಗಿ 2,303 ಡಾಲರ್‌ (ಅಂದಾಜು ₹1.92 ಲಕ್ಷ) ಮತ್ತು 29.20 ಡಾಲರ್‌ನಂತೆ (ಅಂದಾಜು ₹2,441) ಮಾರಾಟ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT