ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲ್ಯಾಪ್‌ಟಾಪ್‌ ಆಮದು: 110 ಅರ್ಜಿಗೆ ಕೇಂದ್ರ ಸರ್ಕಾರ ಒಪ್ಪಿಗೆ

Published 1 ನವೆಂಬರ್ 2023, 14:23 IST
Last Updated 1 ನವೆಂಬರ್ 2023, 14:23 IST
ಅಕ್ಷರ ಗಾತ್ರ

ನವದೆಹಲಿ: ಲ್ಯಾಪ್‌ಟಾಪ್‌ ಮತ್ತು ಕಂಪ್ಯೂಟರ್‌ ಸೇರಿದಂತೆ ಐ.ಟಿ. ಹಾರ್ಡ್‌ವೇರ್‌ಗಳನ್ನು ಆಮದು ಮಾಡಿಕೊಳ್ಳಲು ಅನುಮತಿ ಕೋರಿ 111 ಅರ್ಜಿಗಳು ಸಲ್ಲಿಕೆ ಆಗಿದ್ದವು. ಅದರಲ್ಲಿ 110 ಅರ್ಜಿಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.

ಆ್ಯಪಲ್, ಡೆಲ್‌, ಲೆನೊವೊ, ಎಚ್‌ಪಿ ಇಂಡಿಯಾ, ಐಬಿಎಂ ಇಂಡಿಯಾ, ಸ್ಯಾಮ್ಸಂಗ್‌, ಶಿಯೋಮಿ, ಸಿಸ್ಕೊ, ಮೈಕ್ರೊಸಾಫ್ಟ್‌ ಸೇರಿದಂತೆ ಪ್ರಮುಖ ಕಂಪನಿಗಳು ಆಮದು ಒಪ್ಪಿಗೆಯನ್ನು ಪಡೆದುಕೊಂಡಿವೆ ಎಂದು ಹೇಳಿದ್ದಾರೆ.

ತಿರಸ್ಕೃತ ಕಂಪನಿಗಳ ಪಟ್ಟಿಯಲ್ಲಿ ಇದ್ದ ಕಾರಣಕ್ಕೆ ಹೈದರಾಬಾದ್‌ ಮೂಲದ ಒಂದು ಕಂಪನಿಗೆ ಒಪ್ಪಿಗೆ ನೀಡಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಲ್ಯಾಪ್‌ಟಾಪ್‌ ಮತ್ತು ಕಂಪ್ಯೂಟರ್‌ಗಳನ್ನು ಆಮದು ಮಾಡಿಕೊಳ್ಳಲು ಆನ್‌ಲೈನ್‌ ದೃಢೀಕರಣ ವ್ಯವಸ್ಥೆಯನ್ನ ಅಕ್ಟೋಬರ್ 19ರಿಂದ ಜಾರಿಗೊಳಿಸಲಾಗಿದೆ. ವಿದೇಶಿ ವ್ಯಾಪಾರದ ಮಹಾ ನಿರ್ದೇಶನಾಲಯದ (ಡಿಜಿಎಫ್‌ಟಿ) ಪ್ರಕಾರ, ಆನ್‌ಲೈನ್‌ ದೃಢೀಕರಣ ಪಡೆದುಕೊಳ್ಳಲು ಆಮದುದಾರರು ನೋಂದಣಿ ಮಾಡಿಕೊಳ್ಳುವ ಅಗತ್ಯ ಇಲ್ಲ. ಆಮದು ಮಾಡಿಕೊಳ್ಳುವ ವಸ್ತುಗಳ ಪ್ರಮಾಣ, ಮೌಲ್ಯದ ವಿವರ ನೀಡಬೇಕು. ಈ ಹಿಂದೆ ಆಮದು, ರಫ್ತು ವಹಿವಾಟು ನಡೆಸಿರುವ ಮಾಹಿತಿ ಮತ್ತು ಒಟ್ಟು ವಹಿವಾಟಿನ ವಿವರವನ್ನೂ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT