ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಎಫ್‌ಗೆ ಶೇ 8.1 ಬಡ್ಡಿದರ: ಕೇಂದ್ರ ಸರ್ಕಾರದಿಂದ ಅಧಿಸೂಚನೆ

Last Updated 3 ಜೂನ್ 2022, 19:30 IST
ಅಕ್ಷರ ಗಾತ್ರ

ನವದೆಹಲಿ: ನೌಕರರ ಭವಿಷ್ಯ ನಿಧಿ ಠೇವಣಿಗಳಿಗೆ 2021–22ನೇ ಸಾಲಿಗೆ ಶೇ 8.1ರಷ್ಟು ಬಡ್ಡಿದರ ನೀಡಲು ಕೇಂದ್ರ ಸರ್ಕಾರವು ಶುಕ್ರವಾರ ಒಪ್ಪಿಗೆ ನೀಡಿದೆ.

ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಈ ಕುರಿತು ಅಧಿಸೂಚನೆ ಹೊರಡಿಸಿದೆ. 1977–78 ರಿಂದೀಚೆಗಿನ ನೀಡುತ್ತಿರುವ ಅತ್ಯಂತ ಕಡಿಮೆ ಮಟ್ಟದ ಬಡ್ಡಿದರ ಇದಾಗಿದೆ. ಆ ಸಾಲಿನಲ್ಲಿ ಶೇ 8ರಷ್ಟು ಬಡ್ಡಿದರ ನೀಡಲಾಗಿತ್ತು. ಇಪಿಎಫ್‌ಒದಲ್ಲಿ ಐದು ಕೋಟಿಗೂ ಹೆಚ್ಚಿನ ಚಂದಾದಾರರು ಇದ್ದಾರೆ.

2020–21ನೇ ಸಾಲಿಗೆ ಶೇ 8.5ರಷ್ಟು ಬಡ್ಡಿದರ ನೀಡಲಾಗಿತ್ತು. ಇದಕ್ಕೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷಕ್ಕೆ ನಿಗದಿಪಡಿಸಿರುವ ಬಡ್ಡಿದರವು ಶೇ 0.4ರಷ್ಟು ಕಡಿಮೆ ಆಗಲಿದೆ.

ಪಿ.ಎಫ್. ಠೇವಣಿಗೆ ಶೇ 8.1ರಷ್ಟು ಬಡ್ಡಿ ಕೊಡಬೇಕು ಎಂಬ ತೀರ್ಮಾನವನ್ನು ಇಪಿಎಫ್‌ಒ ಧರ್ಮದರ್ಶಿಗಳ ಮಂಡಳಿಯು ಮಾರ್ಚ್‌ ತಿಂಗಳಿನಲ್ಲಿ ಕೈಗೊಂಡಿತ್ತು. ಈ ತೀರ್ಮಾನಕ್ಕೆ ಕೇಂದ್ರ ಹಣಕಾಸು ಸಚಿವಾಲಯವು ಒಪ್ಪಿಗೆ ನೀಡಿದೆ. ಬಡ್ಡಿಯ ಮೊತ್ತವು ಚಂದಾದಾರರ ಖಾತೆಗಳಿಗೆ ಜಮಾ ಆಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT