ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

₹170 ಲಕ್ಷ ಕೋಟಿ ಮೀರಿದ ಕೇಂದ್ರದ ಸಾಲ

ಕೇಂದ್ರ ಸರ್ಕಾರದ ಒಟ್ಟು ಸಾಲವು 2024ರ ಮಾರ್ಚ್‌ ಅಂತ್ಯದ ವೇಳೆಗೆ ₹171.78 ಲಕ್ಷ ಕೋಟಿಗೆ ಏರಿಕೆಯಾಗಿದೆ.
Published 28 ಜೂನ್ 2024, 20:27 IST
Last Updated 28 ಜೂನ್ 2024, 20:27 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರದ ಒಟ್ಟು ಸಾಲವು 2024ರ ಮಾರ್ಚ್‌ ಅಂತ್ಯದ ವೇಳೆಗೆ ₹171.78 ಲಕ್ಷ ಕೋಟಿಗೆ ಏರಿಕೆಯಾಗಿದೆ. 2023ರ ಡಿಸೆಂಬರ್‌ ಅಂತ್ಯದಿಂದ ಆರಂಭಗೊಂಡು 2024ರ ಮಾರ್ಚ್‌ ಅಂತ್ಯದ ವೇಳೆದ ವೇಳೆ ಶೇ 3.4ರಷ್ಟು ಏರಿಕೆಯಾಗಿದೆ ಎಂದು ಹಣಕಾಸು ಸಚಿವಾಲಯದ ಸಾರ್ವಜನಿಕ ಸಾಲದ ನಿರ್ವಹಣಾ ತ್ರೈಮಾಸಿಕ ವರದಿಯಲ್ಲಿ (ಜನವರಿ–ಮಾರ್ಚ್‌, 2024) ಹೇಳಲಾಗಿದೆ

₹166.14 ಲಕ್ಷ ಕೋಟಿ;2023ರ ಡಿಸೆಂಬರ್‌ ಅಂತ್ಯದಲ್ಲಿ ಇದ್ದ ಸಾಲದ ಮೊತ್ತ

₹171.78 ಲಕ್ಷ ಕೋಟಿ;2024ರ ಮಾರ್ಚ್‌ ಅಂತ್ಯದ ವೇಳೆ ಇದ್ದ ಸಾಲದ ಮೊತ್ತ

ಶೇ 3.4: ಏರಿಕೆಯಾದ ಸಾಲದ ಪ್ರಮಾಣ

–––

₹154.95 ಲಕ್ಷ ಕೋಟಿ (90.2%);ಕೇಂದ್ರ ಸರ್ಕಾರದ ವಿವಿಧ ಸಾಲಗಳ ಮೊತ್ತ

₹16.83 ಲಕ್ಷ ಕೋಟಿ (9.8%);ಸರ್ಕಾರ ವಿತರಿಸಿರುವ ಬಾಂಡ್‌ಗಳ ಬದಲಿಗೆ ನೀಡಬೇಕಿರುವ ಮೊತ್ತ ಮತ್ತು ವಿವಿಧ ಮರುಪಾವತಿಗಳ ಮೊತ್ತ

––––

ವಿತ್ತೀಯ ಕೊರತೆ: ಶೇ 3ರಷ್ಟು

ಈ ಆರ್ಥಿಕ ವರ್ಷದ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿನ ಕೇಂದ್ರ ಬಜೆಟ್‌ನ ವಿತ್ತೀಯ ಕೊರತೆಯು ಶೇ 3ರಷ್ಟಾಗಿದೆ. ಲೋಕಸಭೆ ಚುನಾವಣೆಯ ಕಾರಣ ನೀತಿ ಸಂಹಿತೆ ಜಾರಿಯಲ್ಲಿತ್ತು. ಈ ಕಾರಣದಿಂದಾಗಿ ಸರ್ಕಾರವು ಕಡಿಮೆ ವೆಚ್ಚ ಮಾಡಿದೆ ಎಂದು ಸಿಜಿಎ ಹೇಳಿದೆ. 2023–24ನೇ ಸಾಲಿನ ಆರ್ಥಿಕ ವರ್ಷದ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಬಜೆಟ್‌ನ ವಿತ್ತೀಯ ಕೊರತೆಯು ಶೇ 11.8ರಷ್ಟಿತ್ತು.

2023–24ನೇ ಸಾಲಿನಲ್ಲಿ ಬಜೆಟ್‌ನ ವಿತ್ತೀಯ ಕೊರತೆಯು ಶೇ 5.6ರಷ್ಟಿತ್ತು. ಇದು ಶೇ 5.08ರಷ್ಟಾಗಲಿದೆ ಎಂದು ಅಂದಾಜು ಮಾಡಲಾಗಿತ್ತು. 2025–26ನೇ ಸಾಲಿನಲ್ಲಿ ಶೇ 4.5ರಷ್ಟು ವಿತ್ತೀಯ ಕೊರತೆಯು ಸಾಧಿಸಬೇಕು ಎಂಬ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ.

3%;2024–25ನೇ ಸಾಲಿನ ಆರ್ಥಿಕ ವರ್ಷದ ಏಪ್ರಿಲ್‌–ಮೇ ತಿಂಗಳಿನ ವಿತ್ತೀಯ ಕೊರತೆ ಪ್ರಮಾಣ

11.8%;2023–24ನೇ ಸಾಲಿನ ಆರ್ಥಿಕ ವರ್ಷದ ಏಪ್ರಿಲ್‌–ಮೇ ತಿಂಗಳಿನ ವಿತ್ತೀಯ ಕೊರತೆ ಪ್ರಮಾಣ

ಆಧಾರ: ಪಿಟಿಐ

–––––

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT