ನವದೆಹಲಿ: ಷೇರು ವಹಿವಾಟು ಕಂಪನಿ ‘ಗ್ರೋವ್’ ಆರಂಭಿಕ ಸಾರ್ವಜನಿಕ ಷೇರು ಹಂಚಿಕೆ (ಐಪಿಒ) ಅನುಮತಿ ಕೋರಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಅರ್ಜಿ ಸಲ್ಲಿಸಿದೆ.

₹5,955 ಕೋಟಿಯಿಂದ ₹8,507 ಕೋಟಿ (1 ಬಿಲಿಯನ್ ಡಾಲರ್) ಬಂಡವಾಳ ಸಂಗ್ರಹಕ್ಕೆ ಮುಂದಾಗಿದೆ. ಈ ಮೊತ್ತವನ್ನು ತಂತ್ರಜ್ಞಾನದ ಅಭಿವೃದ್ಧಿ ಮತ್ತು ವಹಿವಾಟು ವಿಸ್ತರಣೆಗೆ ಬಳಸಿಕೊಳ್ಳಲು ಉದ್ದೇಶಿಸಿದೆ ಎಂದು ಮೂಲಗಳು ಸುದ್ದಿಸಂಸ್ಥೆ ಪಿಟಿಐಗೆ ಸೋಮವಾರ ತಿಳಿಸಿವೆ.

ಈ ಹಂಚಿಕೆಯನ್ನು ನಿರ್ವಹಿಸಲು ಗ್ರೋವ್, ಜೆ.ಪಿ ಮಾರ್ಗನ್ ಇಂಡಿಯಾ ಪ್ರೈವೆಟ್ ಲಿಮಿಟೆಡ್, ಕೋಟಕ್ ಮಹೀಂದ್ರ ಕ್ಯಾಪಿಟಲ್ ಕಂಪನಿ ಲಿಮಿಟೆಡ್, ಸಿಟಿ ಗ್ರೂಪ್ ಗ್ಲೋಬಲ್ ಮಾರ್ಕೆಟ್ಸ್ ಪ್ರೈ. ಲಿಮಿಟೆಡ್, ಎಕ್ಸಿಸ್ ಕ್ಯಾಪಿಟಲ್ ಲಿಮಿಟೆಡ್ ಮತ್ತು ಮೋತಿಲಾಲ್ ಓಸ್ವಾಲ್ ಸೆಕ್ಯುರಿಟೀಸ್ ಲಿಮಿಟೆಡ್ ಅನ್ನು ನೇಮಿಸಿಕೊಂಡಿದೆ ಎಂದು ತಿಳಿಸಿವೆ.

2016ರಲ್ಲಿ ಗ್ರೋವ್ ಆರಂಭವಾಗಿದ್ದು, ಪ್ರಸಕ್ತ ವರ್ಷದ ಮಾರ್ಚ್ ವೇಳೆಗೆ ಮಾರುಕಟ್ಟೆಯಲ್ಲಿ ಶೇ 26ರಷ್ಟು ಪಾಲನ್ನು ಹೊಂದಿದೆ. 1.29 ಕೋಟಿ ಬಳಕೆದಾರರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.