ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಷ್ಯಾದಿಂದ ಆಮದು ಶೇ 67ರಷ್ಟು ಹೆಚ್ಚಳ

ಭಾರತಕ್ಕೆ ಕಚ್ಚಾ ತೈಲ, ರಸಗೊಬ್ಬರ ಆಮದು ಪ್ರಮಾಣ ಏರಿಕೆ
Published 14 ಅಕ್ಟೋಬರ್ 2023, 10:47 IST
Last Updated 14 ಅಕ್ಟೋಬರ್ 2023, 10:47 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತವು ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ಸೆಪ್ಟೆಂಬರ್‌ ಅವಧಿಯಲ್ಲಿ ರಷ್ಯಾದಿಂದ ₹2.49 ಲಕ್ಷ ಕೋಟಿ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದೆ. 

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹1.51 ಲಕ್ಷ ಕೋಟಿ ಮೌಲ್ಯದ ಆಮದು ವಹಿವಾಟು ನಡೆದಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಶೇ 67ರಷ್ಟು ಏರಿಕೆ ಕಂಡುಬಂದಿದೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ. ಈ ಮೂಲಕ ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಭಾರತಕ್ಕೆ ಅತಿ ಹೆಚ್ಚು ಆಮದು ಮಾಡುವ ದೇಶಗಳ ಸಾಲಿನಲ್ಲಿ ರಷ್ಯಾ ದೇಶವು ಎರಡನೇ ಸ್ಥಾನ ಪಡೆದುಕೊಂಡಿದೆ.

ಕಚ್ಚಾ ತೈಲ ಮತ್ತು ರಸಗೊಬ್ಬರ ಆಮದು ಪ್ರಮಾಣ ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎಂದು ಸಚಿವಾಲಯ ಹೇಳಿದೆ. ಸಚಿವಾಲಯವು ನೀಡಿರುವ ಅಂಕಿ–ಅಂಶಗಳ ಪ್ರಕಾರ, ಚೀನಾದಿಂದ ಭಾರತಕ್ಕೆ ಆಮದಾಗುತ್ತಿರುವ ಸರಕುಗಳ ಮೌಲ್ಯವು ₹4.35 ಲಕ್ಷ ಕೋಟಿಯಿಂದ ₹4.18 ಲಕ್ಷ ಕೋಟಿಗೆ ಇಳಿಕೆ ಕಂಡಿದೆ.

ಅಮೆರಿಕದಿಂದ ಆಮದು ಆಗಿರುವ ಸರಕುಗಳ ಮೌಲ್ಯವು ₹2.14 ಲಕ್ಷ ಕೋಟಿಯಿಂದ ₹1.77 ಲಕ್ಷ ಕೋಟಿಗೆ ಇಳಿಕೆ ಕಂಡಿದೆ. ಯುಎಇನಿಂದ ಆಮದು ₹2.30 ಲಕ್ಷ ಕೋಟಿಯಿಂದ ₹1.71 ಲಕ್ಷ ಕೋಟಿಗೆ ಇಳಿಕೆ ಕಂಡಿದೆ. ಇದೇ ರೀತಿ, ಸೌದಿ ಅರೇಬಿಯಾ, ಇರಾಕ್‌, ಇಂಡೊನೇಷ್ಯಾ, ಸಿಂಗಪುರ ಮತ್ತು ಕೊರಿಯಾ ದೇಶಗಳಿಂದಲೂ ಆಮದು ಕಡಿಮೆ ಆಗಿದೆ.

ಭಾರತವು ಮುಖ್ಯವಾಗಿ 10 ದೇಶಗಳೊಂದಿಗೆ ರಫ್ತು ವಹಿವಾಟು ನಡೆಸುತ್ತಿದೆ. ಏಪ್ರಿಲ್‌–ಸೆಪ್ಟೆಂಬರ್‌ ಅವಧಿಯಲ್ಲಿ ಅಮೆರಿಕ, ಯುಎಇ, ಸಿಂಗಪುರ, ಜರ್ಮನಿ, ಸೌದಿ ಅರೇಬಿಯಾ ಮತ್ತು ಬಾಂಗ್ಲಾದೇಶಕ್ಕೆ ರಫ್ತು ಇಳಿಕೆ ಕಂಡಿದೆ. ಆದರೆ, ಯುಕೆ, ಆಸ್ಟ್ರೇಲಿಯಾ ಮತ್ತು ನೆದರ್ಲೆಂಡ್ಸ್‌ ಜೊತೆಗಿನ ರಫ್ತು ವಹಿವಾಟು ಸಕಾರಾತ್ಮಕ ಬೆಳವಣಿಗೆ ಕಂಡಿದೆ ಎಂದು ಸಚಿವಾಲಯವು ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT