ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

35 ಲಕ್ಷ ಟನ್‌ ಸಕ್ಕರೆ ರಫ್ತಿಗೆ ಒಪ್ಪಂದ: ಐಎಸ್‌ಎಂಎ

ಕೋಟಾದಡಿ 60 ಲಕ್ಷ ಟನ್‌ ರಫ್ತಿಗೆ ಮೇ 31ರವರೆಗೆ ಅವಕಾಶ
Last Updated 17 ನವೆಂಬರ್ 2022, 12:15 IST
ಅಕ್ಷರ ಗಾತ್ರ

ನವದೆಹಲಿ: 2022–23ನೇ ಮಾರುಕಟ್ಟೆ ವರ್ಷದಲ್ಲಿ ಈವರೆಗೆ 35 ಲಕ್ಷ ಟನ್‌ ಸಕ್ಕರೆ ರಪ್ತು ಮಾಡಲು ವಿವಿಧ ದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ (ಐಎಸ್‌ಎಂಎ) ಗುರುವಾರ ಹೇಳಿದೆ.

ಈಗಾಗಲೇ ಅಕ್ಟೋಬರ್‌ನಲ್ಲಿ 2 ಲಕ್ಷ ಟನ್‌ ರಫ್ತು ಮಾಡಲಾಗಿದೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ 4 ಲಕ್ಷ ಟನ್‌ ಸಕ್ಕರೆ ರಫ್ತು ಮಾಡಲಾಗಿತ್ತು ಎಂದು ಸಂಘವು ಪ್ರಕಟಣೆಯಲ್ಲಿ ತಿಳಿಸಿದೆ.

ಸಕ್ಕರೆ ಮಾರುಕಟ್ಟೆಯು ಅಕ್ಟೋಬರ್‌ನಿಂದ ಸೆಪ್ಟೆಂಬರ್‌ ಅವಧಿಯವರೆಗೆ ಇರುತ್ತದೆ. ನವೆಂಬರ್‌ 5ರಂದು ಸರ್ಕಾರವು ಘೋಷಿಸಿದ 2022–23ರ ಸಕ್ಕರೆ ರಫ್ತು ನೀತಿಯ ಪ್ರಕಾರ, ಸಿಎಕ್ಸ್‌ಎಲ್‌ ಮತ್ತು ಟಿಆರ್‌ಕ್ಯೂ ಕೋಟಾದಡಿ 60 ಲಕ್ಷ ಟನ್‌ ಸಕ್ಕರೆ ರಫ್ತು ಮಾಡಲುಮೇ 31ರವರೆಗೆ ಅವಕಾಶ ನೀಡಲಾಗಿದೆ. ದೇಶಿ ಉತ್ಪಾದನೆಯನ್ನು ಪರಿಶೀಲಿಸಿದ ಬಳಿಕ ಹೆಚ್ಚಿನ ಪ್ರಮಾಣದ ರಫ್ತು ಮಾಡಲು ಅವಕಾಶ ಸಿಗಲಿದೆ. ಸರ್ಕಾರವು ರಫ್ತು ನೀತಿ ಘೋಷಿಸುವ ಮೊದಲೇ ಹಲವು ವರ್ತಕರು ರಫ್ತು ಒಪ್ಪಂದ ಮಾಡಿಕೊಂಡಿದ್ದರು ಎಂದು ಅದು ಹೇಳಿದೆ.

ನವೆಂಬರ್‌ 15ರವರೆಗೆ 19.9 ಲಕ್ಷ ಟನ್‌ ಸಕ್ಕರೆ ಉತ್ಪಾದನೆ ಆಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 20.8 ಲಕ್ಷ ಟನ್‌ ಉತ್ಪಾದನೆ ಆಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಅಲ್ಪ ಇಳಿಕೆ ಕಂಡುಬಂದಿದೆ. ಕೆಲವು ಸಕ್ಕರೆ ಕಾರ್ಖಾನೆಗಳು ತಡವಾಗಿ ಕಬ್ಬು ಅರೆಯಲು ಆರಂಭಿಸಿರುವುದೇ ಇದಕ್ಕೆ ಕಾರಣ ಎಂದು ಸಂಘವು ಮಾಹಿತಿ ನೀಡಿದೆ.

2021–22ರಲ್ಲಿಮಾರುಕಟ್ಟೆ ವರ್ಷದಲ್ಲಿ ಭಾರತವು 1.1 ಕೋಟಿ ಟನ್ ಸಕ್ಕರೆ ರಫ್ತು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT