ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಸಂಗ್ರಹದಲ್ಲಿ ಕೊರತೆ ₹ 2.5 ಲಕ್ಷ ಕೋಟಿ: ಸುಭಾಷ್‌ ಚಂದ್ರ ಗರ್ಗ್‌

Last Updated 20 ಜನವರಿ 2020, 19:30 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷಕ್ಕೆ ತೆರಿಗೆ ಸಂಗ್ರಹಿಸುವ ಅಂದಾಜಿನಲ್ಲಿ ₹ 2.5 ಲಕ್ಷ ಕೋಟಿಗಳಷ್ಟು ಕಡಿಮೆಯಾಗಲಿದೆಎಂದು ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್‌ ಚಂದ್ರ ಗರ್ಗ್‌ ಹೇಳಿದ್ದಾರೆ.

'ತೆರಿಗೆ ವರಮಾನ ಸಂಗ್ರಹಕ್ಕೆ ಸಂಬಂಧಿಸಿದಂತೆ ಒಟ್ಟಾರೆ ಜಿಡಿಪಿಯಲ್ಲಿ ಶೇ 1.2ರಷ್ಟು (₹ 2.5 ಲಕ್ಷ ಕೋಟಿ) ಕೊರತೆ ಬೀಳಲಿದೆ. ಹೀಗಾಗಿ, ಲಾಭಾಂಶ ವಿತರಣೆ ಮೇಲಿನ ತೆರಿಗೆ ಕೈಬಿಡುವ ಮತ್ತು ವೈಯಕ್ತಿಕ ಆದಾಯ ತೆರಿಗೆಯಲ್ಲಿ ಸುಧಾರಣೆ ಜಾರಿಗೊಳಿಸಲು ಇದು ಸೂಕ್ತ ಸಮಯವಾಗಿದೆ’ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರವು 2019–20ಕ್ಕೆ ಸರಾಸರಿ ತೆರಿಗೆ ವರಮಾನ ₹ 24.59 ಲಕ್ಷ ಕೋಟಿ ಸಂಗ್ರಹವಾಗುವ ಅಂದಾಜು ಮಾಡಿದೆ.

‘ಕಾರ್ಪೊರೇಟ್‌ ತೆರಿಗೆ, ಎಕ್ಸೈಸ್‌ ಮತ್ತು ಕಸ್ಟಮ್ಸ್‌ ಸುಂಕ ಸಂಗ್ರಹ ನಕಾರಾತ್ಮಕ ಬೆಳವಣಿಗೆ ಕಾಣುವ ಸಾಧ್ಯತೆ ಇದೆ. ಎಕ್ಸೈಸ್ ಸುಂಕ ಸಂಗ್ರಹ ₹ 2.31 ಲಕ್ಷ ಕೋಟಿಯಿಂದ ₹ 2.2 ಲಕ್ಷ ಕೋಟಿಗೆ ಹಾಗೂ ಕಸ್ಟಮ್ಸ್‌ ಸುಂಕ ಸಂಗ್ರಹ ₹ 1.18 ಲಕ್ಷಕೋಟಿಯಿಂದ ₹ 1.06 ಲಕ್ಷ ಕೋಟಿಗೆ ಇಳಿಕೆಯಾಗಲಿದೆ.

‘ತೆರಿಗೆಯೇತರ ವರಮಾನ ಸಂಗ್ರಹದಲ್ಲಿ ಹೆಚ್ಚಳ ಅಥವಾ ವೆಚ್ಚದಲ್ಲಿ ಹೊಂದಾಣಿಕೆ ಮಾಡಿಕೊಂಡರೆಇದು ತೀವ್ರ ಪ್ರಮಾಣದ ಕೊರತೆ ಏನು ಆಗುವುದಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT