ಸೋಮವಾರ, ಸೆಪ್ಟೆಂಬರ್ 27, 2021
21 °C
3ನೇ ಕಂತೆ: ರಿಯಲ್‌ ಎಸ್ಟೇಟ್‌ ಸ್ವತ್ತುಗಳ ಮಾಹಿತಿ

ಸ್ವಿಸ್‌ ಬ್ಯಾಂಕ್‌: ಭಾರತೀಯರ ಖಾತೆ ವಿವರ ತಿಂಗಳಾಂತ್ಯಕ್ಕೆ ಲಭ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ/ಬೆರ್ನ್: ಸ್ವಿಸ್‌ ಬ್ಯಾಂಕ್‌ನಲ್ಲಿ ಖಾತೆಗಳನ್ನು ಹೊಂದಿರುವ ಭಾರತೀಯರ ಕುರಿತು ವಿವರಗಳಿರುವ ದಾಖಲೆಗಳ ಮೂರನೇ ಕಂತೆ ಈ ತಿಂಗಳಾಂತ್ಯಕ್ಕೆ ಭಾರತದ ಕೈಸೇರಲಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

‘ಸ್ವಿಟ್ಜರ್ಲೆಂಡ್‌ನಲ್ಲಿ ಭಾರತೀಯರು ಹೊಂದಿರುವ ರಿಯಲ್‌ ಎಸ್ಟೇಟ್‌ ಸ್ವತ್ತುಗಳ ಕುರಿತ ಮಾಹಿತಿ ಇದೇ ಮೊದಲ ಬಾರಿಗೆ ಲಭ್ಯವಾಗಲಿದೆ’ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಉಭಯ ದೇಶಗಳ ನಡುವಿನ ‘ಸ್ವಯಂಚಾಲಿತ ಮಾಹಿತಿ ವಿನಿಮಯ ಒಪ್ಪಂದ‘ದಡಿ ಈ ಮಾಹಿತಿಯನ್ನು ಒದಗಿಸಲಾಗುತ್ತಿದೆ.

‘ಭಾರತೀಯರು ಹೊಂದಿರುವ ಫ್ಲ್ಯಾಟ್‌ಗಳು, ಅಪಾರ್ಟ್‌ಮೆಂಟ್‌ಗಳು ಹಾಗೂ ಮನೆಗಳ ಸಂಪೂರ್ಣ ವಿವರ ಈ ತಿಂಗಳು ಸಿಗಲಿದೆ. ಈ ಸ್ವತ್ತುಗಳಿಂದ ಪಡೆಯುತ್ತಿರುವ ಆದಾಯದ ವಿವರ ಸಿಗಲಿದ್ದು, ಇದರಿಂದ ಈ ಆಸ್ತಿಗಳಿಗೆ ಸಂಬಂಧಿಸಿದ ತೆರಿಗೆ ಬಾಕಿಯನ್ನು ಲೆಕ್ಕ ಹಾಕಲು ಸಾಧ್ಯವಾಗುವುದು’ ಎಂದು ಅಧಿಕಾರಿಗಳು ಹೇಳಿದ್ದಾರೆ. 

 ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಸ್ವಿಸ್‌ ಬ್ಯಾಂಕ್‌ ಖಾತೆಗಳ ವಿವರಗಳಿರುವ ಎರಡನೇ ಕಂತೆಯನ್ನು ಭಾರತಕ್ಕೆ ನೀಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು