‘ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚಾಗಿದ್ದ ಕಾರಣದಿಂದಾಗಿ ಡೈರಿ ಉತ್ಪನ್ನಗಳ ಬೇಡಿಕೆ ಹೆಚ್ಚಾಗುವುದಕ್ಕೆ ಅಡ್ಡಿ ಉಂಟಾಗಿತ್ತು. ಸಂಸ್ಥೆಗಳಿಂದ ಬರುವ ಬೇಡಿಕೆಯು ಬಹಳ ಕಡಿಮೆ ಆಗಿತ್ತು. ಆದರೆ, ಈಚಿನ ಕೆಲವು ತಿಂಗಳುಗಳಲ್ಲಿ ಬೇಡಿಕೆಯಲ್ಲಿ ಆರೋಗ್ಯಕರ ಚೇತರಿಕೆ ಕಂಡುಬಂದಿದೆ. ಡೈರಿ ಉದ್ಯಮದ ಸಂಘಟಿತ ವಲಯದಲ್ಲಿ ತ್ವರಿತ ಬೆಳವಣಿಗೆ ದಾಖಲಾಗಿದೆ, ಇದು ಇದೇ ಉದ್ಯಮದಲ್ಲಿನ ಅಸಂಘಟಿತ ವಲಯದಲ್ಲಿನ ಬೆಳವಣಿಗೆ ಪ್ರಮಾಣಕ್ಕಿಂತ ಜಾಸ್ತಿ. ಪರಿಸ್ಥಿತಿ ಇದೇ ರೀತಿ ಮುಂದುವರಿಯುವ ಸಾಧ್ಯತೆ ಇದೆ’ ಎಂದು ಐಸಿಆರ್ಎ ಉಪಾಧ್ಯಕ್ಷೆ ಶೀತಲ್ ಶರದ್ ಹೇಳಿದ್ದಾರೆ.