ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಳು, ಚಿನ್ನಾಭರಣ ರಫ್ತು ಇಳಿಕೆ

Published 18 ನವೆಂಬರ್ 2023, 12:59 IST
Last Updated 18 ನವೆಂಬರ್ 2023, 12:59 IST
ಅಕ್ಷರ ಗಾತ್ರ

ನವದೆಹಲಿ: ಭಾರತದಿಂದ ಹರಳು ಮತ್ತು ಚಿನ್ನಾಭರಣ ರಫ್ತು ಅಕ್ಟೋಬರ್‌ನಲ್ಲಿ ಶೇ 11.49ರಷ್ಟು ಇಳಿಕೆ ಕಂಡು ₹22,873 ಕೋಟಿಗೆ ತಲುಪಿದೆ ಎಂದು ಹರಳು ಮತ್ತು ಚಿನ್ನಾಭರಣ ರಫ್ತು ಉತ್ತೇಜನ ಮಂಡಳಿ (ಜಿಜೆಇಪಿಸಿ) ತಿಳಿಸಿದೆ.

2022ರ ಅಕ್ಟೋಬರ್‌ನಲ್ಲಿ ₹25,844 ಕೋಟಿ ಮೌಲ್ಯದ ಹರಳು ಮತ್ತು ಚಿನ್ನಾಭರಣ ರಫ್ತು ಆಗಿತ್ತು ಎಂದು ಅದು ಹೇಳಿದೆ.

ಅಮೆರಿಕ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಬೇಡಿಕೆ ಕಡಿಮೆ ಆಗಿದೆ. ಇದಲ್ಲದೆ ವಜ್ರದ ಪೂರೈಕೆಗೆ ಮಿತಿ ಇರುವುದು ಸಹ ರಫ್ತು ಕಡಿಮೆ ಆಗುವಂತೆ ಮಾಡಿದೆ. ಕ್ರಿಸ್‌ಮಸ್‌ ವೇಳೆ ಬೇಡಿಕೆಯು ಹೆಚ್ಚಾಗುವ ಭರವಸೆ ಇದೆ ಎಂದು ಮಂಡಳಿಯ ಅಧ್ಯಕ್ಷ ವಿಪುಲ್‌ ಶಾ ಹೇಳಿದ್ದಾರೆ.

ಕಟ್‌ ಮತ್ತು ಪಾಲಿಷ್‌ ಆಗಿರುವ ವಜ್ರದ ರಫ್ತು ಈ ವರ್ಷದ ಅಕ್ಟೋಬರ್‌ನಲ್ಲಿ ಶೇ 32.7ರಷ್ಟು ಇಳಿಕೆ ಆಗಿದ್ದು ₹10,495 ಕೋಟಿಯಷ್ಟು ಆಗಿದೆ. 2022ರ ಅಕ್ಟೋಬರ್‌ನಲ್ಲಿ ₹15,594 ಕೋಟಿಯಷ್ಟು ರಫ್ತು ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT