ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಉಕ್ಕು ಉತ್ಪಾದನೆ ಶೇ 11ರಷ್ಟು ಏರಿಕೆ

Published 24 ಡಿಸೆಂಬರ್ 2023, 13:54 IST
Last Updated 24 ಡಿಸೆಂಬರ್ 2023, 13:54 IST
ಅಕ್ಷರ ಗಾತ್ರ

ನವದೆಹಲಿ: ಭಾರತವು ಈ ವರ್ಷದ ನವೆಂಬರ್‌ನಲ್ಲಿ ತನ್ನ ಕಚ್ಚಾ ಉಕ್ಕು ಉತ್ಪಾದನೆಯಲ್ಲಿ ಶೇ 11.4ರಷ್ಟು ಹೆಚ್ಚಳವನ್ನು ದಾಖಲಿಸಿ, 1.17 ಕೋಟಿ ಟನ್‌ಗೆ ತಲುಪಿದೆ ಎಂದು ಜಾಗತಿಕ ಉಕ್ಕು ಸಂಘಟನೆ ​​(ವರ್ಲ್ಡ್ ಸ್ಟೀಲ್) ತಿಳಿಸಿದೆ.

ಜನವರಿ-ನವೆಂಬರ್ ಅವಧಿಯಲ್ಲಿ, ದೇಶದ ಉತ್ಪಾದನೆಯು ಶೇ 12.1ರಷ್ಟು ಏರಿಕೆಯಾಗಿ 12.82 ಕೋಟಿ ಟನ್‌ಗೆ ಮುಟ್ಟಿದೆ ಎಂದು ಜಾಗತಿಕ ಸಂಸ್ಥೆ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

ಜಾಗತಿಕ ಉಕ್ಕು ಉತ್ಪಾದನೆಯು ನವೆಂಬರ್‌ನಲ್ಲಿ 14.55 ಕೋಟಿ ಟನ್‌ ಇತ್ತು. 2022ರ ಇದೇ ತಿಂಗಳಿಗಿಂತ ಶೇ 3.3ರಷ್ಟು ಹೆಚ್ಚಾಗಿದೆ. 2023ರ ಜನವರಿ–ನವೆಂಬರ್‌ನಲ್ಲಿ ಜಾಗತಿಕ ಉತ್ಪಾದನೆ ಶೇ 0.5ರಷ್ಟು ಏರಿಕೆಯಾಗಿ 171.5 ಕೋಟಿ ಟನ್‌ಗೆ ತಲುಪಿದೆ ಎಂದು ವರ್ಲ್ಡ್ ಸ್ಟೀಲ್ ಅಸೋಸಿಯೇಷನ್ ತಿಳಿಸಿದೆ.

ಪ್ರಸ್ತುತ ವರ್ಷದ ನವೆಂಬರ್‌ನಲ್ಲಿ ಚೀನಾವು 7.61 ಕೋಟಿ ಟನ್‌, ಅಮೆರಿಕ 66 ಲಕ್ಷ ಟನ್‌, ರಷ್ಯಾ 64 ಲಕ್ಷ ಟನ್‌, ದಕ್ಷಿಣ ಕೊರಿಯಾ 54 ಲಕ್ಷ ಟನ್‌, ಜರ್ಮನಿ 27 ಲಕ್ಷ ಟನ್‌, ಟರ್ಕಿ 30 ಲಕ್ಷ ಟನ್‌ ಮತ್ತು ಬ್ರೆಜಿಲ್‌ 27 ಲಕ್ಷ ಟನ್‌ ಉಕ್ಕು ಉತ್ಪಾದಿಸಿವೆ. ಆದರೆ ಜಪಾನ್‌ನ ಉತ್ಪಾದನೆಯು ಶೇ 0.9ರಷ್ಟು ಇಳಿಕೆಯಾಗಿ 71 ಲಕ್ಷ ಟನ್‌ಗೆ ತಲುಪಿದೆ ಎಂದು ವರ್ಲ್ಡ್ ಸ್ಟೀಲ್ ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT