ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲೀಲ್ ಪಾರೇಖ್ ವೇತನ ಶೇ 88ರಷ್ಟು ಹೆಚ್ಚಳ

Last Updated 26 ಮೇ 2022, 13:35 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಇನ್ಫೊಸಿಸ್‌ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸಲೀಲ್ ಪಾರೇಖ್ ಅವರ ವೇತನ ಶೇಕಡ 88ರಷ್ಟು ಹೆಚ್ಚಾಗಿದೆ. ಅವರು ವಾರ್ಷಿಕ ₹ 79.75 ಕೋಟಿ ವೇತನ ಪಡೆದಿದ್ದಾರೆ.

ಈ ಹೆಚ್ಚಳದಿಂದಾಗಿ ಪಾರೇಖ್ ಅವರು ದೇಶದಲ್ಲಿ ಅತ್ಯಂತ ಹಚ್ಚು ಸಂಭಾವನೆ ‍ಪಡೆಯುವ ಸಿಇಒಗಳ ಪೈಕಿ ಒಬ್ಬರೆನಿಸಿಕೊಂಡಿದ್ದಾರೆ.

‍ಪಾರೇಖ್ ಅವರನ್ನು ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆಗಿ ಜುಲೈ 1ರಿಂದ ಅನ್ವಯವಾಗುವಂತೆ ಮರುನೇಮಕ ಮಾಡಲು ಅನುಮತಿ ನೀಡುವಂತೆ ಕಂಪನಿಯು ಷೇರುದಾರರ ಒಪ್ಪಿಗೆ ಕೋರಿದೆ.

ಕಂಪನಿಯ ಸಹ ಸಂಸ್ಥಾಪಕ ಮತ್ತು ಅಧ್ಯಕ್ಷ ನಂದನ್ ನಿಲೇಕಣಿ ಅವರು ಸ್ವಇಚ್ಛೆಯಿಂದ ಯಾವುದೇ ಗೌರವಧನ ಪಡೆದಿಲ್ಲ.

ಈಗಿನ ಏರಿಕೆಯ ನಂತರದಲ್ಲಿ ಪಾರೇಖ್ ಮತ್ತು ಇನ್ಫೊಸಿಸ್‌ನ ನೌಕರರ ಸರಾಸರಿ ವೇತನದ ನಡುವಣ ವ್ಯತ್ಯಾಸ ಇನ್ನಷ್ಟು ಜಾಸ್ತಿ ಆಗಲಿದೆ. ಕಂಪನಿಯ ಸಹಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರು, ಸಿಇಒಗಳಿಗೆ ಮಾತ್ರ ದೊಡ್ಡ ಪ್ರಮಾಣದಲ್ಲಿ ವೇತನ ಹೆಚ್ಚಿಸುವುದಕ್ಕೆ ಕೆಲವು ವರ್ಷಗಳ ಹಿಂದೆ ವಿರೋಧ ವ್ಯಕ್ತಪಡಿಸಿದ್ದರು.

ಸಿಇಒ ವೇತನವನ್ನು ಹೋಲಿಕೆ ಮಾಡುವಾಗ ಕಂಪನಿಯ ಸಾಧನೆ ಹಾಗೂ ಷೇರು ಮೌಲ್ಯದಲ್ಲಿನ ಹೆಚ್ಚಳವನ್ನು ಪರಿಗಣಿಸಬೇಕು ಎಂದು ಇನ್ಫೊಸಿಸ್ ಹೇಳಿದೆ.

=

ದೇಶದ ಇತರ ಪ್ರಮುಖ ಐ.ಟಿ. ಕಂಪನಿಗಳ ಸಿಇಒ ವೇತನ ಹೀಗಿದೆ:

ರಾಜೇಶ್ ಗೋಪಿನಾಥನ್ (ಟಿಸಿಎಸ್) – ₹ 25.76 ಕೋಟಿ

ಥಿಯರಿ ಡೆಲಾಪೋರ್ಟ್ (ವಿಪ್ರೊ) – ₹ 64.34 ಕೋಟಿ

ಸಿ. ವಿಜಯಕುಮಾರ್ (ಎಚ್‌ಸಿಎಲ್‌ ಟೆಕ್ನಾಲಜೀಸ್) – ₹ 32.21 ಕೋಟಿ

ಸಿ.ಪಿ. ಗುರ್ನಾನಿ (ಟೆಕ್ ಮಹೀಂದ್ರ)– ₹ 22 ಕೋಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT