ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇನ್ಫೊಸಿಸ್‌: ಡಿಸೆಂಬರ್‌ ತ್ರೈಮಾಸಿಕ ನಿವ್ವಳ ಲಾಭ ₹ 4,466 ಕೋಟಿ

Last Updated 10 ಜನವರಿ 2020, 12:02 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಬೃಹತ್‌ ಐಟಿ ಕಂಪನಿಗಳಲ್ಲಿ ಎರಡನೇ ಸ್ಥಾನದಲ್ಲಿರುವ ಇನ್ಫೊಸಿಸ್‌ ಡಿಸೆಂಬರ್‌ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತಲೂ ಅಧಿಕ ಲಾಭ ಗಳಿಸಿದೆ. ಬ್ಯಾಂಕಿಂಗ್‌ ವಲಯದಲ್ಲಿ ಸಾಫ್ಟ್‌ವೇರ್‌ ಸೇವೆಗಳಿಗೆ ಹೆಚ್ಚು ಒತ್ತು ಸಿಕ್ಕಿರುವುದರಿಂದ ಇನ್ಫೊಸಿಸ್ ಲಾಭದ ಪರಿಣಾಮ ಬೀರಿದೆ.

ಡಿಸೆಂಬರ್‌ 31ರ ವರೆಗೂ ಮೂರು ತಿಂಗಳಲ್ಲಿ ಕಂಪನಿಯ ನಿವ್ವಳ ಲಾಭ ಶೇ 23.7ರಷ್ಟು ಏರಿಕೆಯಾಗಿದ್ದು, ₹ 4,466ಕೋಟಿ ಗಳಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ ₹ 3,610ಕೋಟಿ ಲಾಭ ವರದಿಯಾಗಿತ್ತು. ಆದಾಯ ಶೇ 7.9 ರಷ್ಟು ಹೆಚ್ಚಳದೊಂದಿಗೆ ₹ 23,092 ಕೋಟಿಆಗಿದೆ.ಕಳೆದ ಹಣಕಾಸು ವರ್ಷದಲ್ಲಿ ಇದೇ ಅವಧಿಯಲ್ಲಿ ₹ 21,400 ಕೋಟಿ ಆದಾಯ ಗಳಿಕೆಯಾಗಿತ್ತು.

2019ರ ಡಿಸೆಂಬರ್‌ ವರೆಗೂ ಕಂಪನಿಯ ಒಟ್ಟು ಉದ್ಯೋಗಿಗಳ ಸಂಖ್ಯೆ 2,43,454.

ಅಕ್ಟೋಬರ್‌–ಡಿಸೆಂಬರ್‌ ತ್ರೈಮಾಸಿಕದಲ್ಲಿ ಇನ್ಫೊಸಿಸ್‌ ₹ 4,206 ಕೋಟಿ ಲಾಭ ಗಳಿಸಬಹುದೆಂದು ತಜ್ಞರು ವಿಶ್ಲೇಷಿಸಿದ್ದರು. ಶುಕ್ರವಾರ ಲಾಭಾಂಶ ಪ್ರಕಟಗೊಳ್ಳುವ ಹಿನ್ನೆಲೆ ಷೇರು ಪೇಟೆಯಲ್ಲಿ ಇನ್ಫೊಸಿಸ್‌ ಷೇರು ಬೆಲೆ ಶೇ 1.5ರಷ್ಟು ಏರಿಕೆಯೊಂದಿಗೆ ₹ 738.25 ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT