ಕಂತಿನಲ್ಲಿ ವಿಮೆ ಪರಿಹಾರ ಕರಡು ಪ್ರಕಟ

ಗುರುವಾರ , ಏಪ್ರಿಲ್ 25, 2019
27 °C

ಕಂತಿನಲ್ಲಿ ವಿಮೆ ಪರಿಹಾರ ಕರಡು ಪ್ರಕಟ

Published:
Updated:
Prajavani

ನವದೆಹಲಿ: ಅಪಘಾತ ಮತ್ತು ಆರೋಗ್ಯ ವಿಮೆ ಪ್ರಕರಣಗಳಲ್ಲಿನ ಪರಿಹಾರ ಧನವನ್ನು ಕಂತುಗಳ ರೂಪದಲ್ಲಿ ಪಡೆಯುವ ಯೋಜನೆ ಪರಿಚಯಿಸಲು ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಆಲೋಚಿಸುತ್ತಿದೆ.

ಈ ಸಂಬಂಧ ಪ್ರಾಧಿಕಾರವು ಕರಡು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿದ್ದು, ಭಾಗಿದಾರರಿಂದ ಸಲಹೆ ಸೂಚನೆಗಳನ್ನು ಆಹ್ವಾನಿಸಿದೆ. ಕಂತುಗಳಲ್ಲಿ ಪರಿಹಾರ ಧನ ಪಡೆಯುವುದರಿಂದ ವಿಮೆ ಪಾಲಿಸಿದಾರರು ನಿರ್ದಿಷ್ಟ ಸಮಯದವರೆಗೆ ನಿಯಮಿತ ಆದಾಯ ಪಡೆಯಬಹುದಾಗಿದೆ.

ಈ ಕರಡು ಪ್ರಸ್ತಾವ ಅಧ್ಯಯನ ಮಾಡಿ ವರದಿ ನೀಡಲು ಕಾರ್ಯಪಡೆ ರಚಿಸಲಾಗಿತ್ತು. ಕಾರ್ಯಪಡೆಯು ತನ್ನ ವರದಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸಿದೆ. ಈ ವರದಿ ಆಧರಿಸಿ ಸಿದ್ಧಪಡಿಸಿರುವ ಕರಡು ಮಾರ್ಗದರ್ಶಿ ಸೂತ್ರಗಳಿಗೆ ಪ್ರತಿಕ್ರಿಯೆ ಆಹ್ವಾನಿಸಿದೆ.

ವಿಮೆ ಪಾಲಿಸಿದಾರರು ಒಂದೇ ಬಾರಿಗೆ ಪಾವತಿಯಾಗುವ ಅಥವಾ ಸಮಾನ ಕಂತುಗಳಲ್ಲಿ ಪಾವತಿಯಾಗುವ ಪರಿಹಾರವನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಎರಡೂ ಬಗೆಯ ಸೌಲಭ್ಯಗಳನ್ನು ಬೇರೆ, ಬೇರೆ ಭಾಗಮಾಡಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನೂ ನೀಡಲಾಗಿದೆ. ವಿಮೆ ಯೋಜನೆಗಳ ಮಾರಾಟ ಮತ್ತು ಯೋಜನೆಯ ವಿವಿಧ ಹಂತಗಳಲ್ಲಿ ಈ ಆಯ್ಕೆ ಸ್ವಾತಂತ್ರ್ಯ ಇರಲಿದೆ.

ಕರಡು ಮಾರ್ಗದರ್ಶಿ ಸೂತ್ರಗಳ ಅನ್ವಯ, ಪರಿಹಾರ ಮೊತ್ತವನ್ನು ಗರಿಷ್ಠ ಐದು ವರ್ಷಗಳಲ್ಲಿ ಕಂತುಗಳಲ್ಲಿ ಪಡೆಯಬಹುದಾಗಿದೆ. ಕಂತುಗಳಲ್ಲಿ ಪಡೆಯುವ ಪರಿಹಾರದ ಮೊತ್ತವು, ಒಂದೇ ಬಾರಿಗೆ ಪಡೆಯುವ ಮೊತ್ತಕ್ಕಿಂತ ಹೆಚ್ಚಿಗೆ ಇರಲಿದೆ.

ಪಾಲಿಸಿದಾರರ ಹಿತಾಸಕ್ತಿ ರಕ್ಷಿಸಲು ಮತ್ತು ಅವರು ಸೂಕ್ತ ನಿರ್ಧಾರಕ್ಕೆ ಬರುವುದಕ್ಕೆ ಪರಿಹಾರ ವಿವರಗಳನ್ನು ಸರಳ ಭಾಷೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರಬೇಕು. ಇದೇ 17ರವರೆಗೆ ಅಭಿಪ್ರಾಯ ತಿಳಿಸಲು ಸೂಚಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !