ನವದೆಹಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ ಕಂಪನಿಗಳ ಸಾರ್ವಜನಿಕ ಷೇರು ಹಂಚಿಕೆ (ಐಪಿಒ) ಪ್ರಕ್ರಿಯೆ ಹೆಚ್ಚಿದೆ.

2023ರಲ್ಲಿ 57 ಕಂಪನಿಗಳು ಐಪಿಒ ಮೂಲಕ ₹49,436 ಕೋಟಿ ಬಂಡವಾಳ ಸಂಗ್ರಹಿಸಿದ್ದವು. ಈ ಬಾರಿ ಇಲ್ಲಿಯವರೆಗೆ 75 ಕಂಪನಿಗಳು ಐಪಿಒ ಮೂಲಕ ₹1.3 ಲಕ್ಷ ಕೋಟಿ ಬಂಡವಾಳ ಸಂಗ್ರಹಿಸಿವೆ. ಹುಂಡೈ ಮೋಟರ್ ಇಂಡಿಯಾ, ಸ್ವಿಗ್ಗಿ, ಎನ್ಟಿಪಿಸಿ ಗ್ರೀನ್ ಎನರ್ಜಿ, ಬಜಾಜ್ ಹೌಸಿಂಗ್ ಫೈನಾನ್ಸ್, ಓಲಾ ಎಲೆಕ್ಟ್ರಿಕ್ ಮೊಬಿಲಿಟಿ, ಬ್ರೈನ್ಬೀಸ್ ಸಲ್ಯೂಷನ್ಸ್ ಈ ಪಟ್ಟಿಯಲ್ಲಿರುವ ಪ್ರಮುಖ ಕಂಪನಿಗಳಾಗಿವೆ.

ಡಿಸೆಂಬರ್ನಲ್ಲಿ ವಿಶಾಲ್ ಮೆಗಾಮಾರ್ಟ್ ಸೇರಿ ಹತ್ತು ಕಂಪನಿಗಳು ಐಪಿಒ ಮೂಲಕ ₹20 ಸಾವಿರ ಕೋಟಿ ಬಂಡವಾಳ ಸಂಗ್ರಹಕ್ಕೆ ಮುಂದಾಗಿವೆ.

ಇಂಟರ್ನ್ಯಾಷನಲ್ ಜೆಮೊಲಾಜಿಕಲ್ ಇನ್ಸ್ಟಿಟ್ಯೂಟ್ (ಭಾರತ) ಲಿಮಿಟೆಡ್, ಅವನ್ಸೆ ಫೈನಾನ್ಸ್ ಸರ್ವಿಸಸ್, ಸಾಯಿ ಲೈಫ್ ಸೈನ್ಸಸ್, ಪರಾಸ್ ಹೆಲ್ತ್ಕೇರ್, ಡಿಎಎಂ ಕ್ಯಾಪಿಟಲ್ ಅಡ್ವೈಸರ್ ಕಂಪನಿಗಳು ಬಂಡವಾಳ ಸಂಗ್ರಹಕ್ಕೆ ಸಿದ್ಧತೆ ನಡೆಸಿವೆ.

ವಿಶಾಲ್ ಮೆಗಾಮಾರ್ಟ್ ₹8 ಸಾವಿರ ಕೋಟಿ, ಜೆಮೊಲಾಜಿಕಲ್ ಇನ್ಸ್ಟಿಟ್ಯೂಟ್ ₹4 ಸಾವಿರ ಕೋಟಿ ಹಾಗೂ ಅವನ್ಸೆ ಫೈನಾನ್ಸ್ ಸರ್ವಿಸಸ್ ₹3,500 ಕೋಟಿ ಸಂಗ್ರಹಿಸಲು ನಿರ್ಧರಿಸಿವೆ.

‘ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶ ಹಾಗೂ ಉತ್ತರ ಪ್ರದೇಶದ ಲೋಕಸಭಾ ಉಪ ಚುನಾವಣೆಯ ಫಲಿತಾಂಶವು ಸಾರ್ವಜನಿಕ ಷೇರು ಹಂಚಿಕೆ ಮಾರುಕಟ್ಟೆಗೆ ಮತ್ತಷ್ಟು ಉತ್ತೇಜನ ನೀಡಲಿದೆ’ ಎಂದು ಆನ್ಲೈನ್ ಬ್ರೋಕರೇಜ್ ಸಂಸ್ಥೆ ಟ್ರೇಡೆಜಿನಿ ಸಿಒಒ ಡಿ. ತ್ರಿವೇಶ್ ತಿಳಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಐಪಿಒಗಳ ಮೂಲಕ ಹೂಡಿಕೆದಾರರು ಹೆಚ್ಚು ಲಾಭ ಕಂಡಿದ್ದಾರೆ. 2020–2021ರಿಂದ 2024–25ರ ನಡುವೆ 236 ಐಪಿಒಗಳು ನಡೆಸಿವೆ. ಇವುಗಳ ಸರಾಸರಿ ಗಳಿಕೆ ಶೇ 27ರಷ್ಟಿದೆ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.