ನವದೆಹಲಿ: ಸಾಬೂನು ತಯಾರಿಕೆಯ ಪ್ರಮುಖ ಕಚ್ಚಾ ವಸ್ತುವಾದ ತಾಳೆ ಎಣ್ಣೆ ಬೆಲೆ ಏರಿಕೆಯಾದ ಕಾರಣ ತ್ವರಿತವಾಗಿ ಬಿಕರಿಯಾಗುವ ವಸ್ತುಗಳ (ಎಫ್ಎಂಸಿಜಿ) ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಹಿಂದುಸ್ತಾನ್ ಯೂನಿಲಿವರ್ (ಎಚ್ಯುಎಲ್), ವಿಪ್ರೊ ಸಂಸ್ಥೆಗಳು ಸಾಬೂನಿನ ಬೆಲೆಯನ್ನು ಶೇ 7ರಿಂದ 8ರಷ್ಟು ಹೆಚ್ಚಿಸಿವೆ.

‘ಈ ವರ್ಷದ ಆರಂಭದಿಂದಲೇ ತಾಳೆ ಎಣ್ಣೆಯ ದರ ತ್ವರಿತವಾಗಿ ಶೇ 30ರಷ್ಟು ಏರಿಕೆಯಾಗಿದ್ದರಿಂದ ಮಾರುಕಟ್ಟೆಯಲ್ಲಿರುವ ಪ್ರಮುಖ ಸಾಬೂನು ಉತ್ಪಾದನಾ ಸಂಸ್ಥೆಗಳು ಶೇ 7ರಿಂದ 8ರಷ್ಟು ದರ ಏರಿಕೆ ಮಾಡಿವೆ. ನಾವು ಕೂಡ ಮಾರುಕಟ್ಟೆಯಲ್ಲಿನ ಬೆಳವಣಿಗೆ ಗಮನಿಸಿ, ದರ ಏರಿಕೆ ಮಾಡಿದ್ದೇವೆ’ ಎಂದು ವಿಪ್ರೊ ಕನ್ಸ್ಯೂಮರ್ ಕೇರ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೀರಜ್ ಖತ್ರಿ ತಿಳಿಸಿದರು.

ವಿಪ್ರೊ ಎಂಟರ್ಪ್ರೈಸಸ್ ಭಾಗವಾಗಿರುವ ವಿಪ್ರೊ ಕನ್ಸ್ಯೂಮರ್ ಸಂಸ್ಥೆಯು ಸಂತೂರ್ ಹಾಗೂ ಚಂದ್ರಿಕಾ ಸೋಪ್ಗಳನ್ನು ಹೊಂದಿವೆ. ಎಚ್ಯುಲ್ ಸಂಸ್ಥೆಯು ಡವ್, ಲಕ್ಸ್, ಲೈಫ್ಬಾಯ್, ಲಿರಿಲ್, ಪಿಯರ್ಸ್, ರೆಕ್ಸೋನಾ ಸಾಬೂನಿನ ಬೆಲೆ ಏರಿಕೆ ಮಾಡಿದೆ.

‘ಒಟ್ಟಾರೆ ಸರಕು ಮಾರುಕಟ್ಟೆಯು ಪೂರಕವಾಗಿದ್ದರೂ, ಚಹಾ, ತಾಳೆಎಣ್ಣೆ ದರವು ತೀವ್ರ ಏರಿಕೆ ಉಂಟಾಗಿತ್ತು. ಹೀಗಾಗಿ, ಈ ಉತ್ಪನ್ನಗಳಲ್ಲಿ ಮಾತ್ರ ಬೆಲೆ ಹೆಚ್ಚಿಸಲಾಗಿದೆ. ಹೀಗಿದ್ದರೂ, ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ದರವನ್ನೇ ನಿಗದಿಪಡಿಸಲಾಗಿದೆ’ ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ.

ಆಮದು ಸುಂಕ ಹೆಚ್ಚಳ ಹಾಗೂ ಜಾಗತಿಕ ಮಟ್ಟದಲ್ಲಿ ದರ ಏರಿಕೆ ಮಾಡಿದ್ದರಿಂದ ಸೆಪ್ಟೆಂಬರ್ ಮಧ್ಯಭಾಗದ ವೇಳೆಗೆ ತಾಳೆ ಎಣ್ಣೆ ದರವು ಶೇ 35 ರಿಂದ 40ರಷ್ಟು ಏರಿಕೆ ದಾಖಲಿಸಿತ್ತು. ಇಂಡೊನೇಷ್ಯಾ, ಮಲೇಷ್ಯಾದಿಂದ ಭಾರತವು ಹೆಚ್ಚಿನ ಪ್ರಮಾಣದಲ್ಲಿ ತಾಳೆಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ. 10 ಕೆ.ಜಿ. ತಾಳೆ ಎಣ್ಣೆಗೆ ಮಾರುಕಟ್ಟೆಯಲ್ಲಿ ₹1,370 ದರವಿದೆ.

ಪ್ರತಿಕೂಲ ಹವಾಮಾನದಿಂದ ಉತ್ಪಾದನೆಯಲ್ಲಿ ಕುಸಿತ ಉಂಟಾಗಿದ್ದರಿಂದ ಎಚ್ಯುಎಲ್, ಟಾಟಾ ಕನ್ಸ್ಯೂಮರ್ ಸಂಸ್ಥೆಯು ಚಹಾ ಪುಡಿಯ ಬೆಲೆಯನ್ನು ಏರಿಕೆ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.