ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾ ಸರ್ಕಾರದ ತೆಕ್ಕೆಗೆ ‘ಏರ್‌ ಇಂಡಿಯಾ ಟವರ್‌’

Published 14 ಮಾರ್ಚ್ 2024, 16:13 IST
Last Updated 14 ಮಾರ್ಚ್ 2024, 16:13 IST
ಅಕ್ಷರ ಗಾತ್ರ

ನವದೆಹಲಿ: ಮುಂಬೈನ ನರೀಮನ್‌ ಪಾಯಿಂಟ್‌ನಲ್ಲಿರುವ ಐಕಾನಿಕ್‌ ‘ಏರ್‌ ಇಂಡಿಯಾ ಟವರ್’ ಈಗ ಮಹಾರಾಷ್ಟ್ರ ಸರ್ಕಾರದ ತೆಕ್ಕೆಗೆ ಜಾರಿದೆ. ಎಐ ಅಸೆಟ್ಸ್ ಹೋಲ್ಡಿಂಗ್ ಕಂಪನಿ ಲಿಮಿಟೆಡ್‌ನಿಂದ ₹1,601 ಕೋಟಿಗೆ ಮಹಾರಾಷ್ಟ್ರ ಸರ್ಕಾರವು ಈ ಕಟ್ಟಡವನ್ನು ಖರೀಸಿದಿಸಿದೆ.

ಈ ಕಟ್ಟಡದ ಮಾಲೀಕತ್ವ ವರ್ಗಾವಣೆಗೆ ಕೇಂದ್ರ ಸರ್ಕಾರವು ಅನುಮತಿ ನೀಡಿದೆ. ಕಟ್ಟಡದ ಬದಲಿಗೆ ₹1,601 ಕೋಟಿ ಪಾವತಿಸಲು ಮತ್ತು ಕಂಪನಿಯು ತನಗೆ ನೀಡಬೇಕಿದ್ದ ₹298 ಕೋಟಿ ಬಾಕಿಯನ್ನು ಮನ್ನಾ ಮಾಡಲು ಮಹಾರಾಷ್ಟ್ರ ಸರ್ಕಾರ ಒಪ್ಪಿಕೊಂಡಿದೆ. 

ಏರ್‌ ಇಂಡಿಯಾ ಕಂಪನಿಯನ್ನು ಟಾಟಾ ಗ್ರೂಪ್‌ಗೆ ಮಾರಾಟ ಮಾಡುವುದಕ್ಕೂ ಮುನ್ನ, ಅದರ ಸಾಲ ಮತ್ತು ಇತರ ಸ್ವತ್ತುಗಳ ನಿರ್ವಹಣೆಗೆ ನಾಗರಿಕ ವಿಮಾನಯಾನ ಸಚಿವಾಲಯವು ಎಐ ಅಸೆಟ್ಸ್ ಹೋಲ್ಡಿಂಗ್ ಕಂಪನಿ ಲಿಮಿಟೆಡ್‌ ಅನ್ನು ಸ್ಥಾಪಿಸಿತ್ತು. ಏರ್‌ ಇಂಡಿಯಾ ಟವರ್ ಅನ್ನು 1974ರಲ್ಲಿ ನಿರ್ಮಿಸಲಾಗಿತ್ತು. ಅಮೆರಿಕದ ಖ್ಯಾತ ವಾಸ್ತುಶಿಲ್ಪ ಕಂಪನಿ ಜಾನ್ಸ್‌/ಬರ್ಗೀ ಈ ಕಟ್ಟಡವನ್ನು ನಿರ್ಮಿಸಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT