ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಯಾರಿಕಾ ವಲಯ ಮಂದ ಪ್ರಗತಿ

Last Updated 4 ಮೇ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ದೇಶದ ತಯಾರಿಕಾ ವಲಯದ ಪ್ರಗತಿ ಏಪ್ರಿಲ್‌ನಲ್ಲಿ 8 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ.

ನಿಕೇಯ್‌ ಇಂಡಿಯಾ ಮ್ಯಾನ್ಯುಫ್ಯಾಕ್ಟರಿಂಗ್‌ ಪರ್ಚೇಸಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ 52.6 ರಿಂದ 51.8ಕ್ಕೆ ಇಳಿಕೆಯಾಗಿದೆ.

ಚುನಾವಣೆಯಿಂದ ಹೊಸ ಯೋಜನೆಗಳ ಮಂದಗತಿಯ ಬೆಳವಣಿಗೆ, ಸವಾಲಿನಿಂದ ಕೂಡಿದ ಆರ್ಥಿಕತೆಯು ತಯಾರಿಕಾ ಚಟುವಟಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ನಿಕೇಯ್‌ ಇಂಡಿಯಾ ಸಂಸ್ಥೆ ತಿಳಿಸಿದೆ.

‘ತಯಾರಿಕಾ ವಲಯದಲ್ಲಿ ಬೆಲೆಯ ಒತ್ತಡ ಕಡಿಮೆಯಾಗುತ್ತಿದೆ. ಪ್ರಗತಿಯ ದಿಕ್ಕು ತಪ್ಪುತ್ತಿದೆ. ಹೀಗಾಗಿ ಜೂನ್‌ನಲ್ಲಿ ಆರ್‌ಬಿಐ ಬಡ್ಡಿದರದಲ್ಲಿ ಕಡಿತ ಮಾಡುವ ಸಾಧ್ಯತೆ ಇದೆ’ ಎಂದು ಐಎಚ್‌ಎಸ್‌ ಮರ್ಕಿಟ್‌ನ ಮುಖ್ಯ ಆರ್ಥಿಕ ತಜ್ಞ ಪಾಲಿಯಾನಾ ಡಿ. ಲಿಮಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT