ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಂದಿನಿಂದ ಹೆದ್ದಾರಿ ಬಳಕೆ ಶುಲ್ಕ ಶೇ 5ರಷ್ಟು ಏರಿಕೆ

Published 2 ಜೂನ್ 2024, 19:10 IST
Last Updated 2 ಜೂನ್ 2024, 19:10 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ರಾಷ್ಟ್ರೀಯ ಹೆದ್ದಾರಿ ಬಳಕೆದಾರರ ಶುಲ್ಕವನ್ನು ಶೇ 5ರಷ್ಟು ಹೆಚ್ಚಿಸಿದ್ದು, ಸೋಮವಾರದಿಂದಲೇ (ಜೂನ್‌ 3ರಂದು) ಈ ಪರಿಷ್ಕೃತ ದರ ಜಾರಿಗೆ ಬರಲಿದೆ. 

ಪ್ರಾಧಿಕಾರವು ವಾರ್ಷಿಕವಾಗಿ ಬಳಕೆದಾರರ ಶುಲ್ಕವನ್ನು ಹೆಚ್ಚಿಸುತ್ತದೆ. ದೇಶದ ಎಲ್ಲಾ ಹೆದ್ದಾರಿಗಳಿಗೂ ಅನ್ವಯಿಸುವ ಈ ಪರಿಷ್ಕರಣೆಯು ಏಪ್ರಿಲ್‌ 1ರಿಂದ ಜಾರಿಗೆ ಬರುತ್ತಿತ್ತು. ಆದರೆ, ಈ ಬಾರಿ ಲೋಕಸಭಾ ಚುನಾವಣೆಯ ಕಾರಣ ಶುಲ್ಕ ಏರಿಕೆಯನ್ನು ಮುಂದೂಡಿತ್ತು. 

ಪ್ರತಿವರ್ಷವೂ ಸಗಟು ಹಣದುಬ್ಬರ ಆಧಾರದ ಮೇಲೆ ಬಳಕೆದಾರರ ಶುಲ್ಕವನ್ನು ಪರಿಷ್ಕರಿಸಲಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ. 

ದೇಶದಲ್ಲಿ ಒಟ್ಟು 855 ಟೋಲ್‌ ಪ್ಲಾಜಾಗಳಿವೆ. ಈ ಪೈಕಿ 675 ಪ್ಲಾಜಾಗಳು ಸರ್ಕಾರದ ನೆರವಿನೊಂದಿಗೆ ಕಾರ್ಯಾಚರಣೆ ನಡೆಸುತ್ತವೆ. ಉಳಿದ 180 ಪ್ಲಾಜಾಗಳು ಖಾಸಗಿ ಕಂಪನಿಗಳ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ನಡೆಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT