ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಸ್ವಾಮ್ಯದ ಆಯಿಲ್‌ ಇಂಡಿಯಾ ಲಾಭ ₹1,746 ಕೋಟಿ

Last Updated 12 ಫೆಬ್ರುವರಿ 2023, 10:19 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ಆಯಿಲ್‌ ಇಂಡಿಯಾ ಲಿಮಿಟೆಡ್‌ (ಒಐಎಲ್‌) ಡಿಸೆಂಬರ್ ತ್ರೈಮಾಸಿಕದಲ್ಲಿ ₹ 1,746 ಕೋಟಿ ನಿವ್ವಳ ಲಾಭ ಗಳಿಸಿದೆ. ಇದುವರೆಗಿನ ಕಂಪನಿಯ ಗರಿಷ್ಠ ಲಾಭ ಇದಾಗಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ನಿವ್ವಳ ಲಾಭ ₹1,244 ಕೋಟಿ ಆಗಿತ್ತು ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ತೈಲ ಮತ್ತು ನೈಸರ್ಗಿಕ ಅನಿಲ ದರದಲ್ಲಿ ಆಗಿರುವ ಏರಿಕೆಯಿಂದಾಗಿ ನಿವ್ವಳ ಲಾಭ ಹೆಚ್ಚಾಗಿದೆ ಎಂದು ಹೇಳಿದೆ. ಒಟ್ಟಾರೆ ವಹಿವಾಟು ಮೊತ್ತವು ಶೇ 27ರಷ್ಟು ಹೆಚ್ಚಾಗಿ ₹5,981 ಕೋಟಿಗೆ ಏರಿಕೆ ಆಗಿದೆ.

ಡಿಸೆಂಬರ್ ತ್ರೈಮಾಸಿಕದಲ್ಲಿ ಪ್ರತಿ ಬ್ಯಾರಲ್‌ ಕಚ್ಚಾ ತೈಲ ಉತ್ಪಾದನೆ ಮತ್ತು ಮಾರಾಟದಿಂದ 88.33 ಡಾಲರ್‌ ಸಿಕ್ಕಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಪ್ರತಿ ಬ್ಯಾರಲ್‌ಗೆ 78.59 ಡಾಲರ್ ಸಿಕ್ಕಿತ್ತು.

2022ರ ಡಿಸೆಂಬರ್ 31ರ ಅಂತ್ಯಕ್ಕೆ ಒಂಬತ್ತು ತಿಂಗಳ ಅವಧಿಯಲ್ಲಿ ತೆರಿಗೆ ನಂತರದ ಲಾಭ ₹2,257 ಕೋಟಿಯಿಂದ ₹5,022 ಕೋಟಿಗೆ (ಶೇ 120) ಏರಿಕೆ ಕಂಡಿದೆ.

ಮಧ್ಯಂತರ ಲಾಭಾಂಶ: ಕಂಪನಿಯು ₹10ರ ಮುಖಬೆಲೆಯ ಷೇರಿಗೆ ₹10ರಷ್ಟು ಎರಡನೇ ಮಧ್ಯಂತರ ಲಾಭಾಂಶ ಘೋಷಿಸಿದೆ. ಈ ಮೊದಲು ಪ್ರತಿ ಷೇರಿಗೆ ₹4.50 ಮಧ್ಯಂತರ ಲಾಭಾಂಶ ಘೋಷಿಸಿತ್ತು. ಇದರಿಂದಾಗಿ ಒಟ್ಟು ಮಧ್ಯಂತರ ಲಾಭಾಂಶವು ₹14.50ರಷ್ಟು ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT