ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಸಿಎಸ್‌ ಲಾಭ ಶೇ 8.7ರಷ್ಟು ಹೆಚ್ಚಳ

ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕ
Published 11 ಅಕ್ಟೋಬರ್ 2023, 16:13 IST
Last Updated 11 ಅಕ್ಟೋಬರ್ 2023, 16:13 IST
ಅಕ್ಷರ ಗಾತ್ರ

ಮುಂಬೈ/ಬೆಂಗಳೂರು: ದೇಶದ ಪ್ರಮುಖ ಸಾಫ್ಟ್‌ವೇರ್‌ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ (ಟಿಸಿಎಸ್‌) ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 8.9ರಷ್ಟು ಏರಿಕೆ ಕಂಡಿದ್ದು, ₹11,342 ಕೋಟಿಗೆ ತಲುಪಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಂಪನಿಯ ನಿವ್ವಳ ಲಾಭವು ₹10,431 ಕೋಟಿಯಷ್ಟು ಇತ್ತು.

ಕಂಪನಿಯ ಕಾರ್ಯಾಚರಣಾ ವರಮಾನವು ಶೇ 7.9ರಷ್ಟು ಏರಿಕೆ ಕಂಡಿದ್ದು, ₹59,692 ಕೋಟಿಗೆ ತಲುಪಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ವರಮಾನ ₹55,309 ಕೋಟಿ ಇತ್ತು.

ಎಲ್‌ಎಸ್‌ಇಜಿ ಸಂಸ್ಥೆಯ ಪ್ರಕಾರ, ಕಂಪನಿಯ ಲಾಭವು ಮಾರುಕಟ್ಟೆ ನಿರೀಕ್ಷೆಗಿಂತಲೂ ಅಲ್ಪ ಹೆಚ್ಚಳ ಕಂಡಿದೆ. ಆದರೆ ವರಮಾನವು ನಿರೀಕ್ಷೆಗಿಂತಲೂ ಕಡಿಮೆ ಆಗಿದೆ. ಲಾಭವು ₹11,317 ಕೋಟಿ ಆಗುವ ಅಂದಾಜು ಮಾಡಲಾಗಿತ್ತು. ಆದರೆ, ₹11,342 ಕೋಟಿಗೆ ಅಲ್ಪ ಏರಿಕೆ ಕಂಡಿದೆ. ವರಮಾನವು ₹60,244 ಕೋಟಿ ಆಗಬೇಕು ಎನ್ನುವುದು ಮಾರುಕಟ್ಟೆ ವಿಶ್ಲೇಷಕರ ಅಂದಾಜು ಆಗಿತ್ತು. ಆದರೆ ₹59,692 ಕೋಟಿ ಆಗಿದೆ ಎಂದು ಅದು ತಿಳಿಸಿದೆ.

ಬ್ಯಾಂಕಿಂಗ್‌, ಹಣಕಾಸು ಸೇವೆಗಳು ಮತ್ತು ವಿಮೆ (ಬಿಎಫ್‌ಎಸ್‌ಐ) ವಲಯಗಳಿಂದ ಬರುವ ವರಮಾನವು ಶೇ 0.5ರಷ್ಟು ಇಳಿಕೆ ಕಂಡಿದೆ. 

ಜಾಗತಿಕ ಮಾರುಕಟ್ಟೆಗಳಲ್ಲಿ ಮೂಡಿರುವ ಅನಿಶ್ಚಿತ ಪರಿಸ್ಥಿತಿಯಿಂದಾಗಿ ವರಮಾನದಲ್ಲಿ ನಿರೀಕ್ಷಿತ ಬೆಳವಣಿಗೆ ಸಾಧ್ಯವಾಗುತ್ತಿಲ್ಲ ಎಂದು ಕಂಪನಿಯ ಸಿಇಒ ಕೆ. ಕೃತಿವಾಸನ್‌ ತಿಳಿಸಿದ್ದಾರೆ. ಹೊಸ ಯೋಜನೆಗಳಿಗೆ ಸಹಿ ಮಾಡಲಾಗಿದೆ. ಆದರೆ, ಕಂಪನಿಗಳು ಕೆಲವು ಯೋಜನೆಗಳನ್ನು ಸದ್ಯದ ಮಟ್ಟಿಗೆ ತಡೆಹಿಡಿಯುವುದಷ್ಟೇ ಅಲ್ಲದೆ ಮುಂದಕ್ಕೂ ಹಾಕುತ್ತಿವೆ. ಇದು ವರಮಾನದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

ಷೇರು ಮರುಖರೀದಿ: ₹17,000 ಕೋಟಿ ಮೌಲ್ಯದ ಷೇರುಗಳನ್ನು ಮರಳಿ ಖರೀದಿಸಲು ಕಂಪನಿಯು ಒಪ್ಪಿಗೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT