ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಉಲ್ಲಂಘನೆ: ಕರ್ಣಾಟಕ ಬ್ಯಾಂಕ್‌ಗೆ ಆರ್‌ಬಿಐ ದಂಡ

Last Updated 29 ಮೇ 2020, 6:49 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ವಸೂಲಾಗದ ಸಾಲ (ಎನ್‌ಪಿಎ) ಸೇರಿದಂತೆ ವಿವಿಧ ನಿಯಂತ್ರಣ ಕ್ರಮಗಳನ್ನು ಸಮರ್ಪಕವಾಗಿ ಪಾಲನೆ ಮಾಡದ ಕಾರಣಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌, ಕರ್ಣಾಟಕ ಬ್ಯಾಂಕ್‌ಗೆ ₹ 1.2 ಕೋಟಿ ದಂಡ ವಿಧಿಸಿದೆ.

ನಿಯಮಗಳ ಉಲ್ಲಂಘನೆ ಕಾರಣಕ್ಕೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಇಂಡಿಯಾಕ್ಕೆ ₹ 5 ಕೋಟಿ ಮತ್ತು ಸಾರಸ್ವತ್ ಕೋ–ಆಪರೇಟಿವ್‌ ಬ್ಯಾಂಕ್‌ಗೆ ₹ 30 ಲಕ್ಷ ದಂಡ ವಿಧಿಸಿದೆ.

ಕರ್ಣಾಟಕ ಬ್ಯಾಂಕ್ ಪ್ರಕರಣದಲ್ಲಿ, ಸಂಪತ್ತಿನ ವರ್ಗೀಕರಣ, ಮುಂಗಡಗಳಿಗೆ ಹೆಚ್ಚುವರಿ ಹಣ ಮೀಸಲು ಇಡದಿರುವುದು ಮತ್ತು ವಸೂಲಾಗದ ಸಾಲದ ಖಾತೆಗಳ  (ಎನ್‌ಪಿಎ) ಮಾಹಿತಿಯಲ್ಲಿ ವ್ಯತ್ಯಾಸ ಕಂಡು ಬಂದಿರುವುದರಿಂದ ದಂಡ ವಿಧಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ಈ ಮೂರೂ ಪ್ರಕರಣಗಳಲ್ಲಿ ಕೇಂದ್ರೀಯ ಬ್ಯಾಂಕ್‌ನ ನಿಯಂತ್ರಣ ಕ್ರಮಗಳ ಪಾಲನೆಯಲ್ಲಿನ ನಿರ್ಲಕ್ಷ್ಯದ ಕಾರಣಕ್ಕೆ ದಂಡ ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT