ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

₹2 ಸಾವಿರ ಮುಖಬೆಲೆಯ ಶೇ 97.62ರಷ್ಟು ನೋಟು ವಾಪಸ್‌: ಆರ್‌ಬಿಐ

Published 1 ಮಾರ್ಚ್ 2024, 15:21 IST
Last Updated 1 ಮಾರ್ಚ್ 2024, 15:21 IST
ಅಕ್ಷರ ಗಾತ್ರ

ಮುಂಬೈ: ₹2 ಸಾವಿರ ಮುಖಬೆಲೆಯ ಶೇ 97.62ರಷ್ಟು ನೋಟುಗಳು ಬ್ಯಾಂಕಿಂಗ್‌ ವ್ಯವಸ್ಥೆಗೆ ಮರಳಿದ್ದು, ಇನ್ನೂ ₹8,470 ಕೋಟಿ ಮೌಲ್ಯದ ನೋಟುಗಳು ಸಾರ್ವಜನಿಕರ ಬಳಿ ಇವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಶುಕ್ರವಾರ ತಿಳಿಸಿದೆ.

ಒಟ್ಟು ₹3.56 ಲಕ್ಷ ಕೋಟಿ ಮೌಲ್ಯದ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ 2023ರ ಮೇ 19ರಂದು ಆರ್‌ಬಿಐ ಘೋಷಿಸಿತ್ತು. 

ಬ್ಯಾಂಕ್‌ಗಳಲ್ಲಿ ಠೇವಣಿ ಇಡುವ ಹಾಗೂ ಬೇರೆ ಮುಖಬೆಲೆಯ ನೋಟುಗಳೊಂದಿಗೆ ಬದಲಾಯಿಸಿಕೊಳ್ಳುವುದಕ್ಕೆ ಆರ್‌ಬಿಐನ 19 ಪ್ರಾದೇಶಿಕ ಕಚೇರಿಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಂಚೆ ಮೂಲಕವೂ ಈ ಪ್ರಾದೇಶಿಕ ಕಚೇರಿಗಳಿಗೆ ನೋಟುಗಳನ್ನು ಕಳುಹಿಸಿ ಬದಲಾಯಿಸಿಕೊಳ್ಳಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT