ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹10 ಲಕ್ಷ ಕೋಟಿ ದಾಟಿದ ರಿಲಯನ್ಸ್‌ ವಹಿವಾಟು

Published 22 ಏಪ್ರಿಲ್ 2024, 15:36 IST
Last Updated 22 ಏಪ್ರಿಲ್ 2024, 15:36 IST
ಅಕ್ಷರ ಗಾತ್ರ

ನವದೆಹಲಿ: 2023–24ನೇ ಆರ್ಥಿಕ ವರ್ಷದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ ವಹಿವಾಟು ₹10 ಲಕ್ಷ ಕೋಟಿ ದಾಟಿದೆ. ಈ ಸಾಧನೆ ಮಾಡಿದ ದೇಶದ ಮೊದಲ ಕಂಪನಿ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

2022–23ನೇ ಆರ್ಥಿಕ ವರ್ಷದಲ್ಲಿ ₹9.74 ಲಕ್ಷ ಕೋಟಿ ವಹಿವಾಟು ನಡೆಸಿತ್ತು. ಇದಕ್ಕೆ ಹೋಲಿಸಿದರೆ ವಹಿವಾಟಿನಲ್ಲಿ ಶೇ 2.6ರಷ್ಟು ಏರಿಕೆಯಾಗಿದೆ.

ಹೆಚ್ಚಿನ ತೈಲ ಬೆಲೆಯಿಂದಾಗಿ ವರಮಾನದಲ್ಲೂ ಶೇ 11ರಷ್ಟು ಏರಿಕೆಯಾಗಿದ್ದು, ₹2.64 ಲಕ್ಷ ಕೋಟಿ ಗಳಿಸಿದೆ. 2023–24ನೇ ಪೂರ್ಣ ಹಣಕಾಸು ವರ್ಷದಲ್ಲಿ ನಿವ್ವಳ ಲಾಭವು ₹66,702 ಕೋಟಿಯಿಂದ ₹69,621 ಕೋಟಿಗೆ ಏರಿಕೆಯಾಗಿದೆ.

ಆದರೆ, ಕೊನೆಯ ತ್ರೈಮಾಸಿಕದಲ್ಲಿ (ಜನವರಿ–ಮಾರ್ಚ್‌) ಕಂಪನಿಯ ನಿವ್ವಳ ಲಾಭವು ಸ್ಥಿರವಾಗಿದೆ. ಒಟ್ಟು ₹18,951 ಕೋಟಿ ನಿವ್ವಳ ಲಾಭಗಳಿಸಿದೆ. 2022–23ರ ಇದೇ ಅವಧಿಯಲ್ಲಿ ₹19,299 ಕೋಟಿ ಲಾಭ ಗಳಿಸಿತ್ತು.

ಜಿಯೊಗೆ ₹5,337 ಕೋಟಿ ಲಾಭ:

ರಿಲಯನ್ಸ್‌ ಜಿಯೊ ಕೊನೆಯ ತ್ರೈಮಾಸಿಕದಲ್ಲಿ ₹5,337 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ಇದೇ ಅವಧಿಯಲ್ಲಿ ₹4,716 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಶೇ 13ರಷ್ಟು ಹೆಚ್ಚಳವಾಗಿದೆ. ವರಮಾನವು ಶೇ 11ರಷ್ಟು ಏರಿಕೆಯಾಗಿದ್ದು, ಒಟ್ಟು ₹25,959 ಕೋಟಿಗೆ ಮುಟ್ಟಿದೆ ಎಂದು ಕಂಪನಿ ತಿಳಿಸಿದೆ.

2023–24ನೇ ಆರ್ಥಿಕ ವರ್ಷದಲ್ಲಿ ಒಟ್ಟು ನಿವ್ವಳ ಲಾಭವು ₹20,466 ಕೋಟಿ ಆಗಿದೆ. ಹಿಂದಿನ ಅವಧಿಗಿಂತ ಶೇ 12ರಷ್ಟು ಹೆಚ್ಚಳವಾಗಿದೆ. ವರಮಾನದಲ್ಲಿ ಶೇ 10ರಷ್ಟು ಏರಿಕೆಯಾಗಿ, ₹1 ಲಕ್ಷ ಕೋಟಿಗೆ ಮುಟ್ಟಿದೆ ಎಂದು ಕಂಪನಿ ತಿಳಿಸಿದೆ. 

ಜಿಯೊ ಫೈನಾನ್ಶಿಯಲ್‌ಗೆ ಲಾಭ:    

2023–24ನೇ ಪೂರ್ಣ ಆರ್ಥಿಕ ವರ್ಷದಲ್ಲಿ ಜಿಯೊ ಫೈನಾನ್ಶಿಯಲ್‌ ಸರ್ವಿಸಸ್‌ ಲಿಮಿಟೆಡ್‌ನ ನಿವ್ವಳ ಲಾಭವು ₹1,605 ಕೋಟಿಯಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ ₹31 ಕೋಟಿ ಮಾತ್ರ ಲಾಭ ಗಳಿಸಿತ್ತು. ಕೊನೆಯ ತ್ರೈಮಾಸಿಕದಲ್ಲಿ ₹311 ಕೋಟಿ ಲಾಭ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT