ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವದೆಹಲಿ| ಎಫ್‌ಎಂಸಿಜಿ: ಕಡಿಮೆ ಬೆಲೆ ನಿಗದಿ ಮಾಡಿದ ರಿಲಯನ್ಸ್

Last Updated 26 ಮಾರ್ಚ್ 2023, 16:31 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಎಫ್‌ಎಂಸಿಜಿ ಮಾರುಕಟ್ಟೆಗೆ ಲಗ್ಗೆ ಇರಿಸಿರುವ ರಿಲಯನ್ಸ್ ರಿಟೇಲ್‌ ವೆಂಚರ್ಸ್ ಲಿಮಿಟೆಡ್‌ ಕಂಪನಿಯು, ತನ್ನ ಕೆಲವು ಉತ್ಪನ್ನಗಳಿಗೆ ಪ್ರತಿಸ್ಪರ್ಧಿ ಉತ್ಪನ್ನಗಳಿಗಿಂತ ಶೇಕಡ 35ರವರೆಗೆ ಕಡಿಮೆ ಬೆಲೆ ನಿಗದಿ ಮಾಡಿದೆ.

ಪ್ರತಿಸ್ಪರ್ಧಿ ಉತ್ಪನ್ನಗಳಿಗೆ ಪೈಪೋಟಿ ನೀಡುವಂತೆ ನಿಗದಿ ಮಾಡಿರುವ ಈ ಬೆಲೆಯು ಗ್ರಾಹಕರನ್ನು ಆಕರ್ಷಿಸಲಿದೆ ಎಂದು ಮಾರುಕಟ್ಟೆ ಪರಿಣತರು ನಿರೀಕ್ಷಿಸಿದ್ದಾರೆ.

ಈ ಎಫ್‌ಎಂಸಿಜಿ ಉತ್ಪನ್ನಗಳು ಈಗ ಆಯ್ದ ಮಾರುಕಟ್ಟೆಗಳಲ್ಲಿ ಮಾತ್ರ ಲಭ್ಯವಿವೆ. ಆದರೆ ಕಂಪನಿಯು ದೇಶದಾದ್ಯಂತ ಡೀಲರ್ ಜಾಲವನ್ನು ಕಟ್ಟುತ್ತಿದೆ. ಕಂಪನಿಯು ಗ್ಲಿಮ್ಮರ್, ಗೆಟ್ ರಿಯಲ್ ಮತ್ತು ಪ್ಯುರಿಕ್‌ ಸೋಪುಗಳ ಬೆಲೆಯನ್ನು ₹ 25ಕ್ಕೆ ನಿಗದಿ ಮಾಡಿದೆ. ಇದು ಪ್ರತಿಸ್ಪರ್ಧಿ ಸೋಪುಗಳ ಬೆಲೆಗಿಂತ ಕಡಿಮೆ.

ಪಾತ್ರೆ ತೊಳೆಯುವ ಸೋಪುಗಳ ಬೆಲೆಯನ್ನು ಕಂಪನಿಯು ₹ 5, ₹ 10 ಮತ್ತು ₹ 15ಕ್ಕೆ ನಿಗದಿ ಮಾಡಿದೆ. ಪಾತ್ರೆ ತೊಳೆಯುವ ಜೆಲ್‌ಗಳನ್ನು ₹ 10, ₹ 30 ಹಾಗೂ ₹ 45ಕ್ಕೆ ಮಾರುಕಟ್ಟೆಗೆ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT