70ರ ಗಡಿ ತಲುಪಲಿರುವ ರೂಪಾಯಿ

7
ಜಾಗತಿಕ ವಿದ್ಯಮಾನಗಳ ಪ್ರಭಾವ

70ರ ಗಡಿ ತಲುಪಲಿರುವ ರೂಪಾಯಿ

Published:
Updated:

ಮುಂಬೈ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಈ ವಾರ ರೂಪಾಯಿ ಮೌಲ್ಯ 70ರ ಗಡಿ ತಲುಪಲಿದೆ ಎಂದು ಬ್ಯಾಂಕಿಂಗ್‌ ವಲಯದ ತಜ್ಞರು ಅಂದಾಜಿಸಿದ್ದಾರೆ.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಮೌಲ್ಯ ದಿನೇ, ದಿನೇ ವೃದ್ಧಿಸುತ್ತಿದೆ. ವಿದೇಶಿ ಹೂಡಿಕೆ ಪ್ರಮಾಣ ತಗ್ಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾಗುತ್ತಿದೆ. ಈ ಸಂಗತಿಗಳಿಂದಾಗಿ ರೂಪಾಯಿ ಮೌಲ್ಯ ಕುಸಿತದ ಹಾದಿ ಹಿಡಿಯಲಿದೆ ಎಂದಿದ್ದಾರೆ.

ರೂಪಾಯಿ 70ರ ಗಡಿ ತಲುಪುವುದು ಆರ್ಥಿಕತೆಯ ಪಾಲಿಗೆ ಹಿತಕರವಲ್ಲ. ಹೀಗಾಗಿ ಆರ್‌ಬಿಐ ಮಧ್ಯಪ್ರವೇಶ ಮಾಡಲಿದೆ ಎಂದೂ ಹೇಳಿದ್ದಾರೆ. ಕಚ್ಚಾ ತೈಲ ದರ ಏರಿಕೆಯಿಂದ ಚಾಲ್ತಿ ಖಾತೆ ಕೊರತೆ ಹೆಚ್ಚಾಗಿದೆ. ತೈಲ ಸಂಸ್ಥೆಗಳಿಂದ ಡಾಲರ್‌ಗೆ ಬೇಡಿಕೆ ಹೆಚ್ಚಾಗುತ್ತಿರುವುದು ಸಹ ರೂಪಾಯಿ ಕುಸಿತಕ್ಕೆ ಕಾರಣವಾಗಿದೆ. 

ಬಾಹ್ಯ ವಾಣಿಜ್ಯ ಸಾಲ ಮರುಪಾವತಿ ಮಾಡಬೇಕಿರುವ ಕಂಪನಿಗಳು ಡಾಲರ್‌ ಅನ್ನು ಹೆಚ್ಚಾಗಿ ಸಂಗ್ರಹಿಸುತ್ತಿವೆ. ಇದೂ ರೂಪಾಯಿ ಮೇಲೆ ಒತ್ತಡ ತರುತ್ತಿದೆ ಎಂದು ಬ್ಯಾಂಕ್‌ ಪರಿಣತರು ಹೇಳಿದ್ದಾರೆ.

ಆರ್‌ಬಿಐ ಬಡ್ಡಿದರಗಳಲ್ಲಿ ಏರಿಕೆಯಿಂದ ರೂಪಾಯಿ ಮೌಲ್ಯ ಕುಸಿತ ಕಾಣಲಿದೆ. ಆರ್‌ಬಿಐ, ಜೂನ್‌ 6 ರಂದು ಬಡ್ಡಿದರ ಏರಿಕೆ ಮಾಡಿದ್ದರಿಂದ ₹ 13,600 ಕೋಟಿ ವಿದೇಶಿ ಬಂಡವಾಳ ಷೇರುಪೇಟೆಯಿಂದ ಹೊರ ಹೋಗಿದೆ ಎಂದು ಬ್ಯಾಂಕ್‌ ಆಫ್‌ ಅಮೆರಿಕ ಮೆರಿಲ್‌ ಲಿಂಚ್‌ (ಬಿಒಎಫ್‌ಎಎಂಎಲ್‌) ಹೇಳಿದೆ.  ಡಾಲರ್‌ ಎದುರು ರೂಪಾಯಿ ಮೌಲ್ಯ ಜೂನ್‌ 28ರಂದು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 69.10ಕ್ಕೆ ತಲುಪಿತ್ತು. ಜುಲೈ 5 ಮತ್ತು 6 ರಂದು ಕ್ರಮವಾಗಿ 68.95 ಮತ್ತು 68.87ರ ಸಾರ್ವಕಾಲಿಕ ಕನಿಷ್ಠ ಮಟ್ಟದಲ್ಲಿ ದಿನ ವಹಿವಾಟು ಅಂತ್ಯವಾಗಿತ್ತು.

 

Tags: 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !