ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವರ್ಷ ಶೇ 9.5ರಷ್ಟು ವೇತನ ಹೆಚ್ಚಳ ಅಂದಾಜು

Published 21 ಫೆಬ್ರುವರಿ 2024, 16:28 IST
Last Updated 21 ಫೆಬ್ರುವರಿ 2024, 16:28 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ವರ್ಷ ದೇಶದಲ್ಲಿರುವ ಕಂಪನಿಗಳು ತಮ್ಮ ನೌಕರರಿಗೆ ನೀಡುವ ವೇತನದಲ್ಲಿ ಶೇ 9.5ರಷ್ಟು ಏರಿಕೆ ಮಾಡುವ ನಿರೀಕ್ಷೆಯಿದೆ ಎಂದು ಎಒನ್‌ ವಾರ್ಷಿಕ ವೇತನ ಹೆಚ್ಚಳ ಸಮೀಕ್ಷೆ ಹೇಳಿದೆ.

ದೇಶದ 1,414 ಕಂಪನಿಗಳ ಅಂಕಿ–ಅಂಶಗಳನ್ನು ವಿಶ್ಲೇಷಣೆ ನಡೆಸಿ ಈ ವರದಿ ಸಿದ್ಧಪಡಿಸಲಾಗಿದೆ.

2023ರಲ್ಲಿ ಶೇ 9.7ರಷ್ಟು ವೇತನ ಹೆಚ್ಚಳವಾಗಿತ್ತು. ಇದಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಳದಲ್ಲಿ ಕೊಂಚ ಕಡಿಮೆಯಾಗಲಿದೆ. 2022ರಲ್ಲಿ ಕಂಪನಿಗಳು ವೇತನವನ್ನು ಹೆಚ್ಚಿಸಿದ್ದವು. ಆ ನಂತರ ನಿರೀಕ್ಷಿತ ಪ್ರಮಾಣದಲ್ಲಿ ಸಂಬಳದ ಏರಿಕೆಯಾಗಿಲ್ಲ ಎಂದು ವರದಿ ಹೇಳಿದೆ. 

ಹಣಕಾಸು ಸಂಸ್ಥೆಗಳು, ಎಂಜಿನಿಯರಿಂಗ್‌, ಔಷಧ, ಬಯೊಟೆಕ್ನಾಲಜಿ, ಬಯೊಮೆಡಿಕಲ್‌ ಟೆಕ್ನಾಲಜಿ, ಆಹಾರ ಸಂಸ್ಕರಣೆ ವಲಯಗಳಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ವೇತನ ಏರಿಕೆ ಆಗಲಿದೆ. ಚಿಲ್ಲರೆ, ತಂತ್ರಜ್ಞಾನ ಕನ್ಸಲ್ಟೆನ್ಸಿ ಮತ್ತು ಸೇವಾ ವಲಯಗಳಲ್ಲಿ ವೇತನ ಕಡಿಮೆ ನಿಗದಿಯಾಗಲಿದೆ ಎಂದು ಸಮೀಕ್ಷೆಯು ಅಂದಾಜಿಸಿದೆ.

2022ರಲ್ಲಿ ಕಂಪನಿಗಳಲ್ಲಿ ಕೆಲಸ ತೊರೆಯುವ ಉದ್ಯೋಗಿಗಳ ಪ್ರಮಾಣವು ಶೇ 21.4ರಷ್ಟಿತ್ತು. 2023ರಲ್ಲಿ ಶೇ 18.7ಕ್ಕೆ ಇಳಿಕೆಯಾಗಿದೆ. ಆದರೆ, ಉದ್ಯೋಗ ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆ ಹೆಚ್ಚಿದ್ದು, ನಿರ್ದಿಷ್ಟ ಅವಧಿಯೊಳಗೆ ಕಂಪನಿಗಳಲ್ಲಿ ಕೆಲಸ ತೊರೆಯುವ ನೌಕರರ ಸಂಖ್ಯೆ ಏರಿಕೆಯಾಗಬಹುದು ಎಂದು  ಹೇಳಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT