ಸೋಮವಾರ, ಮೇ 23, 2022
21 °C

ಎಕ್ಸಿಸ್‌, ಕೋಟಕ್ ಬ್ಯಾಂಕ್‌ ಬಡ್ಡಿ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಎಸ್‌ಬಿಐ ಮತ್ತು ಬ್ಯಾಂಕ್ ಆಫ್ ಬರೋಡ ನಂತರ ಈಗ ಎಕ್ಸಿಸ್ ಬ್ಯಾಂಕ್ ಹಾಗೂ ಕೋಟಕ್ ಮಹೀಂದ್ರ ಬ್ಯಾಂಕ್‌ ಕೂಡ ಸಾಲದ ಮೇಲಿನ ಬಡ್ಡಿ ದರವನ್ನು (ಎಂಸಿಎಲ್‌ಆರ್) ಶೇಕಡ 0.05ರಷ್ಟು ಹೆಚ್ಚಿಸಿವೆ.

ಸಾಲದ ಮೇಲಿನ ಬಡ್ಡಿ ದರ ಹೆಚ್ಚಳವನ್ನು ಇತರ ಬ್ಯಾಂಕ್‌ಗಳೂ ಅನುಸರಿಸುವ ಸಾಧ್ಯತೆ ಇದೆ. ಇದರಿಂದಾಗಿ ಬೇರೆ ಬೇರೆ ಬಗೆಯ ಸಾಲಗಳ ಮರುಪಾವತಿ ಕಂತುಗಳ ಮೊತ್ತ ಜಾಸ್ತಿ ಆಗಲಿದೆ. ಬ್ಯಾಂಕ್‌ಗಳು ಸರಿಸುಮಾರು ಮೂರು ವರ್ಷಗಳ ನಂತರದಲ್ಲಿ ಸಾಲದ ಮೇಲಿನ ಬಡ್ಡಿ ದರ ಹೆಚ್ಚಿಸುತ್ತಿವೆ.

ಎಕ್ಸಿಸ್‌ ಬ್ಯಾಂಕ್‌ನ ಬಡ್ಡಿ ದರ ಹೆಚ್ಚಳವು ಏಪ್ರಿಲ್ 18ರಿಂದ, ಕೋಟಕ್‌ ಮಹೀಂದ್ರ ಬ್ಯಾಂಕ್‌ನ ಬಡ್ಡಿ ದರ ಹೆಚ್ಚಳವು ಏಪ್ರಿಲ್‌ 16ರಿಂದ ಜಾರಿಗೆ ಬಂದಿದೆ. ಇದರಿಂದಾಗಿ ಎಂಸಿಎಲ್‌ಆರ್ ಆಧರಿಸಿದ ಸಾಲದ ಕಂತುಗಳ ಮೊತ್ತವು ತುಸು ಜಾಸ್ತಿ ಆಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.