ಎಸ್‌ಬಿಐ ನಿವ್ವಳ ಲಾಭ ಶೇ 69ರಷ್ಟು ಇಳಿಕೆ

7

ಎಸ್‌ಬಿಐ ನಿವ್ವಳ ಲಾಭ ಶೇ 69ರಷ್ಟು ಇಳಿಕೆ

Published:
Updated:

ನವದೆಹಲಿ (ಪಿಟಿಐ): ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ನಿವ್ವಳ ಲಾಭ, ಎರಡನೇ ತ್ರೈಮಾಸಿಕದಲ್ಲಿ ಶೇ 69ರಷ್ಟು ಇಳಿಕೆಯಾಗಿದ್ದು, ₹ 576 ಕೋಟಿಗೆ ಕುಸಿದಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ನಿವ್ವಳ ಲಾಭ ₹ 1,840 ಕೋಟಿ ಇತ್ತು. ವಸೂಲಿಯಾಗದ ಸರಾಸರಿ ಸಾಲದ (ಎನ್‌ಪಿಎ) ಪ್ರಮಾಣದಲ್ಲಿನ ಹೆಚ್ಚಳ ಹಾಗೂ ಇತರೆ ವರಮಾನದಲ್ಲಿನ ಇಳಿಕೆಯಿಂದ ಲಾಭದಲ್ಲಿ ಕುಸಿತ ಕಂಡಿದೆ.

ಒಟ್ಟು ವರಮಾನ ₹ 74,948 ಕೋಟಿಯಿಂದ ₹ 79,303 ಕೋಟಿಗೆ ಏರಿಕೆಯಾಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ. 

ಸರಾಸರಿ ಎನ್‌ಪಿಎ ಶೇ 9.83 ರಿಂದ ಶೇ 9.95ಕ್ಕೆ ಏರಿಕೆಯಾಗಿದೆ. ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸುವ ಮೊತ್ತ ₹ 16,842 ಕೋಟಿಯಿಂದ ₹ 10,381 ಕೋಟಿಗೆ ಇಳಿಕೆಯಾಗಿದೆ. 

ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸುವ ಮೊತ್ತದಲ್ಲಿನ ಏರಿಕೆಯಿಂದಾಗಿ ಮೊದಲ ತ್ರೈಮಾಸಿಕದಲ್ಲಿಯೂ ₹ 4,876 ಕೋಟಿ ನಿವ್ವಳ ನಷ್ಟ ಅನುಭವಿಸಿತ್ತು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 2

  Frustrated
 • 1

  Angry

Comments:

0 comments

Write the first review for this !